ಡೈಲಿ ವಾರ್ತೆ: 26/DEC/2025

ಹೆಜಮಾಡಿ| ನೇಮೋತ್ಸವದಲ್ಲಿ ವೃದ್ಧೆಯ ಸರ ಎಗರಿಸಿದ ತಮಿಳುನಾಡಿನ ಕಳ್ಳಿಯರ ಬಂಧನ

ಉಡುಪಿ: ಹೆಜಮಾಡಿ ಸಮೀಪದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಿದ ತಮಿಳುನಾಡು ಮೂಲದ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಶೀಥಲ್, ಕಾಳಿಯಮ್ಮ ಮತ್ತು ಮಾರಿ (40) ಎಂದು ಗುರುತಿಸಲಾಗಿದೆ.

ಗರಡಿಯಲ್ಲಿ ನೇಮೋತ್ಸವ ನಡೆಯುತ್ತಿದ್ದ ಸಂದರ್ಭ ಈ ಮೂವರು ಕಳ್ಳಿಯರು ಹೆಜಮಾಡಿ ನಿವಾಸಿ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಜನಸಂದಣಿಯ ಮಧ್ಯೆಯೇ ಎಗರಿಸಿದ್ದರು. ಈ ಕುರಿತ ವೀಡಿಯೊ ವೈರಲ್ ಆಗಿದ್ದು ಕಳ್ಳಿಯರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಇದೀಗ ತಮಿಳುನಾಡು ಮೂಲದ ಮೂವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.