
ಡೈಲಿ ವಾರ್ತೆ: 29/DEC/2025
ಕುಂದಾಪುರ| ವೆಂಕಟರಮಣ ದೇವಸ್ಥಾನ ಮುಂಭಾಗದ ಪಟಾಕಿ ಅಂಗಡಿಗೆ ಬೆಂಕಿ – ಹಲವು ಅಂಗಡಿಗಳು ಸುಟ್ಟುಕರಕಲು, ಅಪಾರ ನಷ್ಟ

ಕುಂದಾಪುರ: ಕುಂದಾಪುರದ ಹೆಸರಾಂತ ಪುಸ್ತಕ ಮಳಿಗೆ ಹಾಗೂ ಪಟಾಕಿ ಮಳಿಗೆಗಳನ್ನು ಹೊಂದಿದ್ದ ಕಟ್ಟಡಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾದ ಘಟನೆ ಡಿ.29 ರಂದು ಸೋಮವಾರ ಮುಂಜಾನೆ 3:30ರ ಸುಮಾರಿಗೆ ನಡೆದಿದೆ.
ಕುಂದಾಪುರ ಪೇಟೆಯ ವೆಂಕಟರಮಣ ದೇವಸ್ಥಾನದ ಎದುರು ರಥಬೀದಿಯಲ್ಲಿರುವ ಪುಸ್ತಕ ಮಳಿಗೆ ಹಾಗೂ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗಲಿ ಸುಟ್ಟು ಭಸ್ಮವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸಪಟ್ಟರು. ಅಲ್ಲದೆ ಕಟ್ಟಡದಲ್ಲಿದ್ದ ಮೂರು ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿದೆ ಎನ್ನಲಾಗಿದೆ.