



ಡೈಲಿವಾರ್ತೆ:18/ಏಪ್ರಿಲ್ /2026

ಎಕ್ಸಲೆಂಟ್ ಕುಂದಾಪುರ: ಬೇಸಿಗೆ ಕ್ರೀಡಾ ಶಿಬಿರದ ಸಮಾರೋಪ ಹಾಗೂ ಎಕ್ಸಲೆಂಟ್ ಟ್ರೋಪಿ ಪ್ರಶಸ್ತಿ ವಿತರಣಾ ಕರ‍್ಯಕ್ರಮ

ಕುಂದಾಪುರ: ಕ್ರೀಡೆಯಲ್ಲಿ ಮಹೋನ್ನತ ಸಾಧನೆಯನ್ನು ಮಾಡುವ ಕನಸನ್ನು ಹೊಂದಿರುವ ವಿದ್ಯರ‍್ಥಿಗಳ ಮನೋಭಿಲಾಷೆಯನ್ನು ಈಡೇರಿಸಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಅಂತಹ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರ, ಇಲ್ಲಿ ಬೇಸಿಗೆ ಕ್ರೀಡಾ ಶಿಬಿರವನ್ನು 04/04/2026 ರಂದು ನವೀನ್ ಕಾಂಚನ್ ರಾಷ್ಟ್ರೀಯ ವಾಲಿಬಾಲ್ ಆಟಗಾರನ ನೇತೃತ್ವದಲ್ಲಿ ಅದ್ದೂರಿಯಾಗಿ ಉದ್ಘಾಟನೆ ಮಾಡಲಾಯಿತು.
ಸತತ 15 ದಿನಗಳ ಕಾಲ ನಡೆದ ಈ ಕ್ರೀಡಾ ಶಿಬಿರಕ್ಕೆ ಉಡುಪಿ ಜಿಲ್ಲೆಯ ನೂರಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. ಭಾಗವಹಿಸಿದ ವಿದ್ಯರ‍್ಥಿಗಳಿಗೆ ರಾಜ್ಯದ ಹಾಗೂ ಜಿಲ್ಲೆಯ ಖ್ಯಾತ ತರಬೇತುದಾರರ ಮರ‍್ಗರ‍್ಶನದ ಮೂಲಕ 20 ವಿದ್ಯರ‍್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಈ 20ವಿದ್ಯರ‍್ಥಿಗಳಿಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಉಚಿತ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯರ‍್ಥಿಗಳಿಗೆ ಉಜ್ವಲ ಭವಿಷ್ಯ ದೊರಕುವಂತಾಯಿತು.
ಈ 15 ದಿನಗಳ ಕಾಲ ನಡೆದ ಶಿಬಿರದ ಸಮಾಪ್ತಿಯ ದಿನವಾದ 17/04/2016 ರಂದು ಎಲ್ಲಾ ಹೊರಗಿನ ವಿದ್ಯರ‍್ಥಿಗಳಿಗೂ ಸಹ ಉಚಿತವಾದ ವಾಲಿಬಾಲ್ ಟರ‍್ನಮೆಂಟ್ ಅನ್ನು ಆಯೋಜಿಸಲಾಯಿತು.
‘ಎಕ್ಸಲೆಂಟ್ ಟ್ರೋಪಿ 2026’ ಉಚಿತ ವಾಲಿಬಾಲ್ ಟರ‍್ನಮೆಂಟ್ ಗೆ ಜಿಲ್ಲೆಯ 16 ತಂಡಗಳು ಭಾಗವಹಿಸಿರುತ್ತದೆ. ಈ ಒಂದು ಬೇಸಿಗೆ ಕ್ರೀಡಾ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ವಿತರಣಾ ಕರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಂದನ್ ಆಚರ‍್ಯ ಹಾಗೂ ರಾಷ್ಟ್ರೀಯ ವಾಲಿಬಾಲ್ ಪಟು ಇವರು ಪ್ರಶಸ್ತಿ ವಿತರಣೆ ಮಾಡಿ ಕ್ರೀಡೆಯ ಮಹತ್ವದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಉಪನ್ಯಾಸಕರಾದ ಜೀವನ ಕುಮಾರ್ ಶೆಟ್ಟಿ ಅವರು ಸಾಧನೆ ಮಾಡಿದ ವಿದ್ಯರ‍್ಥಿಗಳ ಕರ‍್ಯ ಚಟುವಟಿಕೆಯ ಬಗ್ಗೆ ಕೊಂಡಾಡಿದರು. ಎಂ ಎಂ ಹೆಗ್ಡೆ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು ಉತ್ತಮ ಆಟವಾಡಿ ಉಚಿತ ಶಿಕ್ಷಣ ಪಡೆದ ವಿದ್ಯರ‍್ಥಿಗಳ ಬಗ್ಗೆ ಹಾಗೂ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯರ‍್ಥಿಗಳ ಕ್ರೀಡಾ ಸ್ಪರ‍್ತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸುಸಂರ‍್ಭದಲ್ಲಿ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಮುಖ್ಯೋಪಾಧ್ಯಾಯನಿ ಸರೋಜಿನಿ ಪಿ ಆಚರ‍್ಯ, ಸಿಬಿಎಸ್ಸಿ ವಿಭಾಗದ ಸಂಯೋಜಕಿ ವಿಶಾಲ ಶೆಟ್ಟಿ, ದೈಹಿಕ ಶಿಕ್ಷಣ ನರ‍್ದೇಶಕರಾದ ವಿಶಾಲ್ ಖರ‍್ವಿ, ವಿಖ್ಯಾತ್ ಕಂಡ್ಲೂರು, ಸುರ‍್ಶನ್ ಆಚರ‍್ಯ ಹುಸ್ಸೆಮಕ್ಕಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಸಿಕ್ ಶೆಟ್ಟಿ ಅವರು ಕರ‍್ಯಕ್ರಮವನ್ನು ನಿರೂಪಿಸಿದರು.