ಡೈಲಿವಾರ್ತೆ: 27/ಜು./2026

ಕೋಟ ಸಹಕಾರಿ ಸಂಘಕ್ಕೆ ನೂತನ ಉಪಾಧ್ಯಕ್ಷ: ರವೀಂದ್ರ ಕಾಮತ್ ಅವಿರೋಧ ಆಯ್ಕೆ

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ) ಕೋಟದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರವೀಂದ್ರ ಕಾಮತ್ ಅವರು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷ ಕೃಷ್ಣ ಕಾಂಚನ್ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರವೀಂದ್ರ ಕಾಮತ್ ಅವರ ಆಯ್ಕೆ ಅವಿರೋಧವಾಗಿ ನಡೆಯಿತು.
ಚುನಾವಣಾ ಪ್ರಕ್ರಿಯೆಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಅವರು ಸುಸೂತ್ರವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ನೂತನ ಉಪಾಧ್ಯಕ್ಷ ರವೀಂದ್ರ ಕಾಮತ್ ಅವರಿಗೆ ಶುಭಾಶಯಗಳನ್ನು ಕೋರಿ, ಸಂಘದ ಅಭಿವೃದ್ಧಿಗೆ ಅವರಿಂದ ಉತ್ತಮ ಸೇವೆ ಲಭಿಸಲಿ ಎಂದು ಹಾರೈಸಿದರು.