ಡೈಲಿ ವಾರ್ತೆ:21 ಮಾರ್ಚ್ 2023

ಪಾವಗಡದಲ್ಲಿ ನಡೆದ ಬೈಕ್ ಅಪಘಾತದಲ್ಲಿ ದಕ್ಷಿಣ ಕನ್ನಡದ ಯುವಕ ಮೃತ್ಯು

ತುಮಕೂರು:ತುವಕೂರಿನ ಪಾವಗಡದಲ್ಲಿ ನಡೆದ ಅಪಘಾತದಲ್ಲಿ ಸುಳ್ಯ ನಿವಾಸಿ ಯುವಕ ಮೃತಪಟ್ಟ ಘಟನೆ ನಡೆದಿದೆ.

ಸುಳ್ಯದ ನಿವಾಸಿ ರಿಕ್ಷಾ ಚಾಲಕರಾಗಿರುವ ರಮೇಶ್ ಎಂಬವರ ಪುತ್ರ ಪ್ರಜ್ವಲ್(25) ಮೃತ ಯುವಕ.
ಪ್ರಜ್ವಲ್ ಪಾವಗಡದಲ್ಲಿ ಟೋಲ್ ಸೂಪರ್‍ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ರವಿವಾರ ತಡ ರಾತ್ರಿ ಪ್ರಜ್ವಲ್ ಬೈಕ್‍ನಲ್ಲಿ ತೆರಳುತ್ತಿದ್ದಾಗ ಟೋಲ್ ಸಮೀಪ ಬೈಕ್ ಸ್ಕಿಡ್ ಆಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.