ಸಾಂದರ್ಭಿಕ ಚಿತ್ರ

ಡೈಲಿ ವಾರ್ತೆ:18 ಏಪ್ರಿಲ್ 2023

ಬ್ರಹ್ಮಾವರ ಅಕ್ರಮ ಕಳ್ಳಭಟ್ಟಿ ತಯಾರಿ: ಪೊಲೀಸ್ ದಾಳಿ – ಓರ್ವನ ಬಂಧನ

ಬ್ರಹ್ಮಾವರ : ಚೇರ್ಕಾಡಿ ಗ್ರಾಮದ ನೂಜಿಬೈಲ್ ಎಂಬಲ್ಲಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚೇರ್ಕಾಡಿ ಗ್ರಾಮದ ಗ್ರೇಗೋರಿ ಡಿ ಅಲ್ಮೇಡಾ (64) ಪೊಲೀಸರು ವಶಕ್ಕೆ ಪಡೆದ ಆರೋಪಿ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬ್ರಹ್ಮಾವರ ಠಾಣಾ ಪೊಲೀಸರು, ಚೇರ್ಕಾಡಿ ಗ್ರಾಮದ ನೂಜಿಬೈಲ್ ಎಂಬಲ್ಲಿನ ಆರೋಪಿಯ ಮನೆ ಬಳಿ ದಾಳಿ ಮಾಡಿದ್ದರು. ಈ ವೇಳೆ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಯು ತಾನು ತನ್ನ ಮನೆಯ ಹಟ್ಟಿಯ ಬಳಿ ಅಕ್ರಮವಾಗಿ ಕಳ್ಳಭಟ್ಟಿಯನ್ನು ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಬಳಿಕ ಪೊಲೀಸರು ಸ್ಥಳದಲ್ಲಿ ಇದ್ದ ಕಳ್ಳಭಟ್ಟಿ ತುಂಬಿರುವ ಬಾಟಲಿಗಳು ಹಾಗೂ ಕಳ್ಳಭಟ್ಟಿ ತಯಾರಿಸಲು ಬಳಸುವ ಇತರ ವಸ್ತುಗಳು ಸೇರಿ 2500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.