ಡೈಲಿ ವಾರ್ತೆ:19 ಮೇ 2023

ಬೆಳಗಾವಿ:ಮಧ್ಯರಾತ್ರಿ ಶಾಲೆಯ ಕೊಠಡಿಯ ಮುಂದೆ ಯುವಕನನ್ನು ಕೊಚ್ಚಿ ಕೊಲೆಮಾಡಿದ ದುಷ್ಕರ್ಮಿಗಳು!

ಬೆಳಗಾವಿ : ಬೆಳಗಾವಿ ಜಿಲ್ಲೆ ಮಾರಿಹಾಳ ಸರ್ಕಾರಿ ಕನ್ನಡ ಶಾಲಾ ಕೊಠಡಿಯ ಎದುರು ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ‌ನಡೆದಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಮಹಾಂತೇಶ ರುದ್ರಪ್ಪ ಕರಲಿಂಗಣ್ಣವರ್ (24) ಎಂಬಾತನ ಹತ್ಯೆ ಮಾಡಲಾಗಿದೆ.

ಬೆಳ್ಳಂಬೆಳಗ್ಗೆ ರಕ್ತದ ಮಡುವಿನಲ್ಲಿ ಬಿದ್ದ ಯುವಕನ ಮೃತದೇಹ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಮಧ್ಯರಾತ್ರಿ ಮಹಾಂತೇಶ ಕರಲಿಂಗಣ್ಣವರ್ ಅವರ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಸ್ಥಳದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಪರಾದ ವಿಭಾಗದ ಡಿಸಿಪಿ ಪಿ.ಸ್ನೇಹ ಮತ್ತು ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.