ಡೈಲಿ ವಾರ್ತೆ:21 ಜೂನ್ 2023
ಕಲಾಬಾಗಿಲು : ಬುರೂಜ್ ಶಾಲೆಯಲ್ಲಿ ಯೋಗ ದಿನಾಚರಣೆ
ಬಂಟ್ವಾಳ : ಕಲಾಬಾಗಿಲು – ರಝಾನಗರದ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ವಿದ್ಯಾರ್ಥಿಗಳು ಯೋಗ ಮಾಡುವ ಮೂಲಕ ಯೋಗ ದಿನ ಆಚರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ.ಬಿ. ಉದ್ಘಾಟಿಸಿದರು, ಶಿಕ್ಷಕಿಯರಾದ ಈ ರೂಹಿ ಹಾಗೂ ರಝೀಯಾ ಮಾರ್ಗದರ್ಶನ ನೀಡಿದರು. ಯೋಗದ ಮಹತ್ವವನ್ನು ವಿವರಿಸಿದ ಚಂದ್ರಾವತಿ ಅವರು ಮಾತನಾಡಿ
ಯೋಗಾಸನಗಳು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸು ವುದಲ್ಲದೆ ಇದೊಂದು ಆರೋಗ್ಯಕರ ಜೀವನಕಲೆ, ಕಲಿತ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವಂತೆ ತಿಳಿಸಿದರು.