ಡೈಲಿ ವಾರ್ತೆ: 29 ಜೂನ್ 2023
ಫ್ರೀ ಬಸ್‌ನಲ್ಲಿ ಟ್ರಿಪ್‍ಗೆ ಹೋದ ತನ್ನ ಪತ್ನಿ ಬಂದಿಲ್ಲವೆಂದು ಬಸ್ ಅಡಿ ಬಿದ್ದು ಸಾಯಲು ಹೋದ ಕುಡುಕ ಪತಿ!
ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಒಂದಲ್ಲ ಒಂದು ಅವಾಂತರಗಳು ಬಯಲಾಗ್ತಾನೇ ಇವೆ. ಇದೀಗ ಕುಡುಕ ಪತಿಯೊಬ್ಬ ಟ್ರಿಪ್‍ಗೆ ಹೋದ ತನ್ನ ಪತ್ನಿ ಬಂದಿಲ್ಲವೆಂದು ಅವಾಂತರ ಸೃಷ್ಟಿಸಿದ್ದಾನೆ.
ಹೊಸಕೋಟೆಯ ಬಸ್ ನಿಲ್ದಾಣದಲ್ಲಿ ಪತ್ನಿ ವಿರುದ್ಧ ಸಿಟ್ಟಿಗೆದ್ದ ಪತಿ ಬಸ್ ಟೈಯರ್ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪರಿಣಾಮ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ಧಗಂಟೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಕೆಲಕಾಲ ಪರದಾಟ ಅನುಭವಿಸಿದರು.
ನನ್ನ ಹೆಂಡತಿ ಟ್ರಿಪ್ ಗೆ ಹೋದವಳು ಇನ್ನೂ ವಾಪಸ್ ಬಂದಿಲ್ಲ. ಸಿದ್ದರಾಮಯ್ಯ ಸರಿಯಿಲ್ಲ, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ. ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣವನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿದ್ದಾನೆ.
ಕಂಠಪೂರ್ತಿ ಕುಡಿದಿರುವ ವ್ಯಕ್ತಿ ತೂರಾಡಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲದೆ ಬಸ್ ಟೈಯರ್ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ನೆರೆದ ಜನ ಆತನನ್ನು ರಕ್ಷಣೆ ಮಾಡಿದ್ದಾರೆ. ನಂತರ ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.