ಡೈಲಿ ವಾರ್ತೆ:23 ಆಗಸ್ಟ್ 2023
ವರದಿ : ವಿದ್ಯಾಧರ ಮೊರಬಾ
ವಂದಿಗೆ ರಸ್ತೆಗೆ ಮರು ಡಾಂಬರೀಕರಣಕ್ಕೆ ಆಗ್ರಹಿಸಿ ಲೋಕೋಪಯೋಗಿ ಇಲಾಖೆಗೆ ಸ್ಥಳೀಯರಿಂದ ಮನವಿ
ಅಂಕೋಲಾ : ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಪುನರ್ ನಿರ್ಮಾಣದ ಕುರಿತು ವಂದಿಗೆ ಗ್ರಾಮಸ್ಥರು ಇಲಾಖೆಯ ಎದುರಿಗೆ ಜಮಾಯಿಸಿ ಬುಧವಾರ ಎಇಇ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ತಿಳಿಸಿದಂತೆ ವಂದಿಗೆ ಗ್ರಾಪಂ.ವ್ಯಾಪ್ತಿಯಲ್ಲಿ ಬರುವ 1 ಕೀ.ಮೀ ಲೋಕೋಪಯೋಗಿ ಇಲಾ ಖೆಗೆ ಸೇರಿದ್ದು, ಈ ರಸ್ತೆಗೆ ಕಳೆದ 25 ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ನಂತರದಲ್ಲಿ ಯಾವುದೇ ರಿಪೇರಿ ವಗೈರೆ ಆಗಿರುವುದಿಲ್ಲಾ. ಈಗ ಆ ರಸ್ತೆಯು ತುಂಬಾ ಹದಗೆಟ್ಟಿದ್ದು, ದ್ವಿಚಕ್ರ ವಾಹನಗ ಳಲ್ಲಿ ಸಂಚಾರ ಮಾಡಲು ಮತ್ತು ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ಮಕ್ಕಳು ಹೊಂಡ ತಪ್ಪಿಸಿ ಹೋಗುಲು ಬಹಳ ತೊಂದರೆಯಾಗಿದೆ. ಇದರಿಂದ ಈ ರಸ್ತೆಗೆ ಮರು ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ ಎಂದರು.
ಇಲಾಖೆಯ ಕಿರಿಯ ಅಭಿಯಂತಕ ಸುದೀರ ನಾಯ್ಕ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಂಜಿತ ರಾಮದಾಸ ನಾಯಕ, ವಿಘ್ನೇಶ ರಾಮಚಂದ್ರ ನಾಯಕ, ಹರೀಶ ದೇವಣ್ಣ ನಾಯಕ, ಹೊನ್ನಪ್ಪ ನಾರಾಯಣ ನಾಯಕ, ನಾರಾಯಣ ವಿ.ನಾಯಕ, ಉದಯ ರಾಕು ನಾಯಕ, ದಾಸ ರಾಮಚಂದ್ರ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.