ಡೈಲಿ ವಾರ್ತೆ:25 ಆಗಸ್ಟ್ 2023

ವರದಿ : ವಿದ್ಯಾಧರ ಮೊರಬಾ

ಅಂಕೋಲಾ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ಜಗದೀಶ ನಾಯ್ಕ

ಅಂಕೋಲಾ : ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ಜಗದೀಶ ದತ್ತಾತ್ರೇಯ ನಾಯ್ಕ ಇವರು ಆ.14 ರಂದು ಅಧಿಕಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ಪ್ರಭಾರ ಟಿಎಚ್‍ಓ ಕಾರ್ಯನಿರ್ವಹಿಸುತ್ತಿದ್ದ ಡಾ. ನಿತೀನ ಹೊಸ್ಮೇಲ್ಕರ ಹಾರವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ.

ಇಲ್ಲಿ ಕಳೆದ 8 ವರ್ಷದಿಂದ ತಾಲೂಕಿನಲ್ಲಿ ಪ್ರಭಾರ ಟಿಎಚ್‍ಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಅಂಕೋಲಾಕ್ಕೆ ಖಾಯಂ ಟಿಎಚ್‍ಓ ಆಗಿ ಕುಮಟಾ ತಾಲೂಕಿನ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಡಾ. ಜಗದೀಶ ನಾಯ್ಕ ವರ್ಗಾವಣೆಗೊಂಡಿದ್ದಾರೆ. ಇವರು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ 2012 ರಿಂದ 2016 ರ ತನಕ ಆಡಳಿತಾಧಿಕಾರಿಯಾಗಿ ಮತ್ತು ಅರವಳಿಕೆ ತಜ್ಞರಾಗಿ ಕಾರ್ಯನಿರ್ವಹಿಸಿದ್ದರು.