ಡೈಲಿ ವಾರ್ತೆ: 23/Sep/2023

ಹಂಗಳೂರು: ಖಲಂದರ್ ಖಾಂದಾನ್ ವತಿಯಿಂದ ಮಹಿಳಾ ಮಣಿಯರಿಗೆ ಸನ್ಮಾನ

ಕುಂದಾಪುರ: ಎಂಟನೇ ವರ್ಷದ ಖಲಂದರ್ ಖಾಂದಾನ್ ಮೌಲೀದ್ ವತಿಯಿಂದ ಸೆ. 23 ರಂದು ಶನಿವಾರ ಬೆಳಿಗ್ಗೆ ಹಂಗಳೂರು ಹುಸೇನಬ್ಬ ರವರ ಮನೆಯಲ್ಲಿ 4 ಜನ ಮಹಿಳಾ ಮಣಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಖಲಂದರ್ ಖಾಂದಾನ್ ದ ಅಧ್ಯಕ್ಷರಾದ ಜನಾಬ್ ಖಲಂದರ್ ರವರು ಈ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ನಾಲ್ಕು ಜನ ಮಹಿಳೆಯರಾದ ಜೈನಾಬ್, ಖತಿಜ, ಪಾತಿಮಾಬಿ, ಬೀಬಿ ಆಯಿಷಾ ರವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಖಲಂದರ್ ಖಾಂದಾನ್ ದ ಸದಸ್ಯರು, ಹಿರಿಯರು ಕಿರಿಯರು ಎಲ್ಲರೂ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ಸಾದಿಕ್ ನಿರೂಪಿಸಿ ವಂದಿಸಿದರು.

ವಿ. ಸೂ: 24/09/2023 ರಂದು ಭಾನುವಾರ ಬೆಳಿಗ್ಗೆ 9:30 ಕ್ಕೆ ದುವಾ ಕಾರ್ಯಕ್ರಮ ಹಾಗೂ ಖಾಂದಾನ್ ಮೌಲೀದ್ ಹಂಗಳೂರು ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಖಲಂದರ್ ಖಾಂದಾನ್ ವತಿಯಿಂದ ತಿಳಿಸಲಾಗಿದೆ.