ಡೈಲಿ ವಾರ್ತೆ: 19/Jan/2024

ಉಡುಪಿ: ಹೋಟೆಲ್ ಮಾಲಕಿಯಿಂದ ಲೀಸ್ ಪಡೆದವರ ಮೇಲೆ ಹಲ್ಲೆ, ಬೆದರಿಕೆ – ದೂರು ದಾಖಲು

ಉಡುಪಿ : 2021ನೇ ಜನವರಿ ತಿಂಗಳಿಂದ ಮಮತಾ ಶೆಟ್ಟಿಯವರ ಶಾಂಭವಿ ಲಾಡ್ಜ್ ನಡೆಸಲು ದಿನೇಶ್ ಶೆಟ್ಟಿಯಾದ ನಾನು ಲೀಸ್‌ಗೆ ಪಡೆದು ಅದರಂತೆ ಕರಾರು ಪತ್ರ ಮಾಡಿಕೊಂಡಿದ್ದು ಮಮತಾ ಶೆಟ್ಟಿ ಮತ್ತು ನನ್ನ ನಡುವೆ ಒಪ್ಪಂದ ಆಗಿದ್ದು ಅದರಂತೆ ಲಾಡ್ಜ್ ನಡೆಸುತ್ತಿದ್ದೇನೆ. ಈ ಬಗ್ಗೆ 30 ಲಕ್ಷ ಡೆಪೋಸಿಟ್ ಮತ್ತು ತಿಂಗಳಿಗೆ 2,10,000 ರೂ. ಬಾಡಿಗೆ ನೀಡುತ್ತಿದ್ದೇನೆ.

ಇತ್ತೀಚೆಗೆ ಮಮತಾ ಶೆಟ್ಟಿ ನನ್ನ ಬಳಿ ಶಾಂಭವಿ ಬಾರ್ & ರೆಸ್ಟೋರೆಂಟ್‌ನ್ನು ನನಗೆ ನಡೆಸಲಾಗುತ್ತಿಲ್ಲ. ನೀವು ನಡೆಸಬೇಕೆಂದು ತಿಳಿಸಿದ ಮೇರೆಗೆ ನಾನು, ಸದ್ಯ ಲಾಡ್ಜ್ ನಡೆಸುತ್ತಿರುವ ಕಾರಣ ನನಗೆ ಬಾರ್ & ರೆಸ್ಟೋರೆಂಟ್‌ನ್ನು ನಡೆಸಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿರುತ್ತೇನೆ. ಇದೇ ಉದ್ದೇಶದಿಂದ ನನ್ನನ್ನು ಲಾಡ್ಜ್‌ನಿಂದ ಓಡಿಸಬೇಕೆಂದು ಜನವರಿ 23‌ರಂದು ನನ್ನ ಮೇಲೆ ಉಡುಪಿ ಮಹಿಳಾ ಠಾಣೆಯಲ್ಲಿ ಆಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ನನ್ನ ಮೇಲೆ ಸುಳ್ಳು ವದಂತಿ ಹಬ್ಬಿಸಿ ಸುಳ್ಳು ಕೇಸ್‌ ದಾಖಲು ಮಾಡಿದ್ದಾಗಿ ದಿನೇಶ್ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ನನ್ನ ಲಾಡ್ಜ್‌ನ ರೂಮ್‌ಗೆ ಬರುವವರಿಂದ ಸೂಕ್ತ ದಾಖಲೆಗಳನ್ನು ಪಡೆದು ರೂಮ್ ಕೊಡುತ್ತಿದ್ದೆ. ಕೇವಲ ದುರುದ್ದೇಶದಿಂದ ಈ ಕೇಸ್‌ನ್ನು ಸೃಷ್ಟಿ ಮಾಡಲಾಗಿದೆ. ಬೇರೆ ಬೇರೆ ಭೂಗತ ಪಾತಕಿಗಳಿಂದ ನನಗೆ ಲಾಡ್ಜ್‌ನ್ನು ಬಿಡುವಂತೆ ಫೋನ್ ಮಾಡಿಸಿ ಬೆದರಿಕೆ ಒಡ್ಡವುದು ಹಾಗೂ ನನ್ನ ಲಾಡ್ಜ್‌ಗೆ ಕೆಲ ಕಿಡಿಕೇಡಿಗಳೊಂದಿಗೆ ಆಕ್ರಮ ಪ್ರವೇಶ ಮಾಡಿ ನನಗೆ ಮತ್ತು ಸಿಬ್ಬಂದಿಗಳಿಗೆ ಅವ್ಯಾಚ್ಯವಾಗಿ ಬೈದು ಕೊಲೆ ಬೆದರಿಕೆ ಒಡ್ಡಿದ್ದು ಈ ಬಗ್ಗೆ ನಗರ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಹೇಳಿದರು.

ಸಿಸಿಟಿವಿಯ ದೃಶ್ಯವಾಳಿಗಳನ್ನು ತಿರುಚಿ ನನ್ನ ವಿರುದ್ಧ ಆಕೆ ಮತ್ತು ಆಕೆಯ ಮಗನಿಗೆ ಹಲ್ಲೆ ಮಾಡಿರುತ್ತೇನೆಂದು ಮಹಿಳಾ ಠಾಣೆಯಲ್ಲಿ ನನ್ನ ಬಗ್ಗೆ ಸುಳ್ಳು ದೂರು ಕೊಟ್ಟಿರುತ್ತಾರೆ. ಕರಾರು ಅವಧಿ ಮುಗಿಯದಿದ್ದರೂ ಕೂಡಾ ನನ್ನನ್ನು ಎಬ್ಬಿಸಬೇಕೆಂದು ನನ್ನ ಲಾಡ್ಜ್‌ಗೆ ಬರುವ ಗಿರಾಕಿಗಳ ಎದುರು ಕೆಟ್ಟದಾಗಿ ವರ್ತಿಸಿದ್ದಾಗಿ ದಿನೇಶ್ ಶೆಟ್ಟಿ ಆರೋಪಿಸಿದ್ದಾರೆ.