ಡೈಲಿ ವಾರ್ತೆ: 29/Mar/2024

ಪಂತಡ್ಕ : ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ , 8 ಮಂದಿ ಡಿಸ್ಟಿಂಕ್ಷನ್, ಮೂವರು ಪ್ರಥಮ ದರ್ಜೆಯಲ್ಲಿ ತೇರ್ಗಡೆ

ಬಂಟ್ವಾಳ : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2023-24 ನೇ ಸಾಲಿನ 7 ನೇ ಮತ್ತು 5 ನೇ ತರಗತಿ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧೀನದ ಪಂತಡ್ಕ ತರ್ಬಿಯತುಲ್  ಇಸ್ಲಾಂ ಮದರಸ ಶೇಕಡಾ 100 ಫಲಿತಾಂಶ ಪಡೆದಿರುತ್ತದೆ.

    7 ನೇ ತರಗತಿಯಲ್ಲಿ 6 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

    ನೆಡ್ಯಾಲು ಅಬ್ದುಲ್ ರಹಿಮಾನ್ ಫೈಝಿ ಹಾಗೂ ಅಫ್ಸಾ ದಂಪತಿಗಳ ಪುತ್ರಿ ಆಯಿಷಾ ರಾಫಿಹಾ 459 ಅಂಕ ಗಳಿಸಿ ತರಗತಿಯಲ್ಲಿ ಪ್ರಥಮ ಸ್ಥಾನಿಯಾದರೆ ಉಳಿದಂತೆ ಫಸೀಲಾ ಭಾನು (457), ಫಾತಿಮಾ ಶಿಬಾ (454), ಸ್ವಲಾಹುದ್ದೀನ್ (442), ಫಾತಿಮಾ ಸಅಲಾ (440), ಮುಹಮ್ಮದ್ ಸಾಹಿದ್ (434) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

   5 ನೇ ತರಗತಿಯಲ್ಲಿ 5 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಫಾತಿಮಾ ಸೈಲಾ (453), ಮುಹಮ್ಮದ್ ಹಫಿಲ್ (415) ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದರೆ, ಆಯಿಷಾ ಸನಾ (385),  ಫಝಲ್ ರಹಿಮಾನ್ (379), ಮಹಮ್ಮದ್ ಸಝನ್ (356) ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಮದರಸ ಸದರ್ ಮುಅಲ್ಲಿಂ ಜಾಫರ್ ಸ್ವಾದಿಕ್ ಅರ್ಶದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.