ಡೈಲಿ ವಾರ್ತೆ: 25/ಜುಲೈ /2024

ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿದು ಬಾಲಕ ಮೃತ್ಯು!

ಮಂಗಳೂರು: ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದು, ಮನೆಯಲ್ಲಿ ಮಲಗಿದ್ದ ಬಾಲಕ ಮೃತಪಟ್ಟ ಘಟನೆ ಮಂಗಳೂರು ಹೊರ ವಲಯದ ಜೋಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಮೃತ ಬಾಲಕ ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಎಂದು ಗುರುತಿಸಲಾಗಿದೆ.

ತಡೆ ಗೋಡೆ ಕುಸಿದು ಬಿದ್ದ ಮನೆಗೆ ಬಾಲಕ ಶೈಲೇಶ್ ಅತಿಥಿಯಾಗಿ ಬಂದಿದ್ದ ಎಂದು ತಿಳಿದು ಬಂದಿದೆ.