



ಡೈಲಿ ವಾರ್ತೆ: 05/ಆಗಸ್ಟ್/2024


ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಶಿಕ್ಷಕರಿಗೆ ನ್ಯಾಯಕ್ಕಾಗಿ ಮಾನ್ಯ ದಂಡಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ

ಲಕ್ಷ್ಮೇಶ್ವರ: ಭಡ್ತಿ ವರ್ಗಾವಣೆಗೆ ದೊಡ್ಡ ಅಡ್ಡಿಯಾಗಿರುವ ವೃಂದ ಮತ್ತು ನೇಮಕ ನಿಯಮ 2017 ಕ್ಕೆ ತಿದ್ದುಪಡಿ ಮಾಡಿ ಶಿಕ್ಷಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಅವಳಿ ತಾಲೂಕಿನ ವತಿಯಿಂದ ಮಾನ್ಯ ದಂಡಾಧಿಕಾರಿಗಳು ಶಿರಹಟ್ಟಿ ಹಾಗೂ ಮಾನ್ಯ ಕ್ಷೇತ್ರಾಧಿಕಾರಿಗಳು ಶಿರಹಟ್ಟಿ ಇವರಿಗೆ ಸಿ ಅಂಡ್ ಆರ್ ನಿಯಮ ತಿದ್ದುಪಡಿ ಸಲುವಾಗಿ ಮನವಿ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರುಗಳಾದ ಬಿ ಎಸ್ ಹರ್ಲಾಪುರ ಎಫ್ ಮಠದ ಕಾರ್ಯದರ್ಶಿಗಳಾದ ಚಂದ್ರು ನೇಕಾರ ಜಿ ಏ ಬೇವಿನಗಿಡದ ಖಜಾಂಚಿ ಬಿ ಬಿ ಯತ್ತಿನಹಳ್ಳಿ ಡಿ ಡಿ ಲಮಾಣಿ , ಎಂ ಎ ನದಾಫ್ ತಳವಾರ, ಮಂಜುನಾಥ ವಾರದ, ಕಟ್ಟೆಣ್ಣವರ, ಆರ್ ಎಸ್ ಪಾಟೀಲ್ ಭೋವಿ ಎಂ ಎಸ್ ಹಿರೇಮಠ ಶಿವಾನಂದ ಅಸುಂಡಿ ತಾಲೂಕಿನ ಅನೇಕ ಶಿಕ್ಷಕರು ಹಾಜರಿದ್ದರು.