ಡೈಲಿ ವಾರ್ತೆ: 01/Sep/2024

ಮಾಣಿ ಬಾಲ ವಿಕಾಸದ ಸ್ಕೌಟ್ಸ್, ಗೈಡ್ಸ್ ಮತ್ತು ಕಬ್ಸ್ ತಂಡಗಳು ಗೀತಗಾಯನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬಂಟ್ವಾಳ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಮಾಣಿ ಇದರ ಆಶ್ರಯದಲ್ಲಿ ಕರ್ನಾಟಕ ಪ್ರೌಢ ಶಾಲೆ, ಮಾಣಿಯಲ್ಲಿ ನಡೆದ ಗೀತ ಗಾಯನ ಸ್ಪರ್ಧೆಯಲ್ಲಿ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್ಸ್, ಗೈಡ್ಸ್ ಮತ್ತು ಕಬ್ಸ್ ತಂಡಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಗೆ ಆಯ್ಕೆಗೊಂಡಿರುತ್ತವೆ ಹಾಗು ಬುಲ್ ಬುಲ್ಸ್ ತಂಡವು ದ್ವಿತೀಯ ಸ್ಥಾನ ಪಡೆದಿರುತ್ತದೆ.

ಸ್ಕೌಟ್ಸ್ ವಿಭಾಗದಿಂದ 9ನೇ ತರಗತಿಯ ಪ್ರೇಮ್ ಮತ್ತು ಕೆ ದಿವಿತ್ ಶೆಟ್ಟಿ, 8ನೇ ತರಗತಿಯ ದೀಪಿತ್ ಶೆಟ್ಟಿ, 7ನೇ ತರಗತಿಯ ನಮನ್ ಮತ್ತು ಅನಾಸ್ ಇಬ್ರಾಹಿಂ, ಹಾಗೂ 6ನೇ ತರಗತಿಯ ಸಾತ್ವಿಕ್ ಕೆ, ಸೂರ್ಯ ಎಸ್ ಆರ್ ಪಂಡಿತ್ ಮತ್ತು ಶ್ರೇಯಸ್ ಎಸ್ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಗೈಡ್ಸ್ ವಿಭಾಗದಿಂದ 9ನೇ ತರಗತಿಯ ದೇವಿಕಾ ಕೆ, ಕೃತಿಕಾ ಮತ್ತು ಸಮೃದ್ಧಿ ಎಸ್, 8ನೇ ತರಗತಿಯ ವರ್ಣಮಯೂರಿ, 7ನೇ ತರಗತಿಯ ಹಸ್ತ ಜಿ, 6ನೇ ತರಗತಿಯ ಸಾನ್ವಿ ಎಸ್ ಮತ್ತು ನತಾಷ ಜಿ ಹಾಗೂ 5ನೇ ತರಗತಿಯ ಆದ್ಯ ಎಸ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಕಬ್ಸ್ ವಿಭಾಗದಿಂದ 4 ನೇ ತರಗತಿಯ ಅನಿಕೇತ್ ಪಿ ವೈ, ಹರ್ಷಲ್ ಹೆಚ್, ದಿಶಾನ್, ಮೊಹಮ್ಮದ್ ರಾಹಿಲ್, ಅದ್ವಿತ್ ಆರ್, ಹಾಗೂ ಎಂ ಪ್ರಣಮ್ ಗೌಡ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಬುಲ್ ಬುಲ್ಸ್ ವಿಭಾಗದಿಂದ 4ನೇ ತರಗತಿಯ ಧನ್ವಿ ಡಿ, ಅಪರ್ಣ ರಾವ್, ಧನ್ವಿ ಎಸ್, 3ನೇ ತರಗತಿಯ ಲಾಸ್ಯ, ಸ್ಟೇಸಿ ಕ್ಯಾಥಲೀನ್ ಪಿಂಟೋ ಹಾಗೂ ಅನ್ವಿತಾ ಶೆಟ್ಟಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.