ಡೈಲಿ ವಾರ್ತೆ: 30/OCT/2024

ಪಟ್ಟಣದ ಗ್ರಂಥಾಲಯ ಹಾಗೂ ಗ್ರಾಮೀಣ ರಸ್ತೆಗಳ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ

ಹರಪನಹಳ್ಳಿ :-  ವಿದ್ಯಾಸಿರಿ ನಾಡಿನ ವಿದ್ಯಾರ್ಥಿಗಳ ಹಾಗೂ ಓದುಗರ ಹಲವು ವರ್ಷದ ಬೇಡಿಕೆ ಈಡೇರಿಸುವ ಸಮಯ ಸಮೀಪಿಸಿದಂತಾಗಿದೆ ಅದರಂತೆ ಕೆಲವೆ ತಿಂಗಳುಗಳಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗುತಲಿದ್ದು ಇದಕ್ಕೆ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನರವರು ಭೂಮಿಪೂಜೆ ನೆರವೇರಿಸಿದರು.

ಪಟ್ಟಣದ ಪೂರ್ವಚಾರಿ ಲೇಔಟ್ ನಲ್ಲಿ ಜಿಲ್ಲಾ ನಗಾರಾಭಿವೃದ್ದಿಕೋಶ ವಿಜಯನಗರ ಜಿಲ್ಲೆ ಹಾಗೂ ಹರಪನಹಳ್ಳಿ ಪುರಸಭೆಯ ಮುಖ್ಯಮಂತ್ರಿಗಳ ಅಮೃತ್ ನಗರ ಅವಾಸ್-4ರ 51.98 ಲಕ್ಷ ರೂ.ಗಳ ಅನುದಾನದ ಗ್ರಂಥಾಲಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿರು.

ಹರಪನಹಳ್ಳಿ ಪಟ್ಟಣದಲ್ಲಿ ಗ್ರಂಥಾಲಯವಿದ್ದರೂ ಹಲವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿತ್ತು. ಜತೆಗೆ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಇರಲಿಲ್ಲ, ಪ್ರತಿದಿನ 200ರಿಂದ 500ಜನ ವಿದ್ಯಾರ್ಥಿಗಳು ಹಾಗೂ ಓದುಗರು ಗ್ರಂಥಾಲಯಕ್ಕೆ ಬರುತ್ತಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಹಾಗೂ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಜ್ಜಾಗುತ್ತಿರುವವರಿಗೆ ಸರ್ಕಾರಿ ಸಾರ್ವಜನಿಕ ಗ್ರಂಥಾಲಯವೇ ಆಧಾರವಾಗಿದೆ.

ಆದರೆ ಪ್ರಸ್ತುತ ಇರುವ ಗ್ರಂಥಾಲಯಕ್ಕೆ ಎಲ್ಲಾ ಮೂಲಭೂತಸೌಲಭ್ಯಗಳು ಸಿಗುತ್ತಿರಲಿಲ್ಲ, ಈ ಹಿನ್ನೆಲೆಯಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಬೇಕು ಎನ್ನುವ ಬೇಡಿಕೆ ಹೆಚ್ಚು ಕೇಳಿಬರುತ್ತಿತ್ತು ಅದಕ್ಕೆ ಈಗ ಸ್ಪಂದನೆ ಸಿಕ್ಕಿದೆ.

ಪೂರ್ವಚಾರಿ ಲೇಔಟ್ ನಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣಮಾಡಲಾಗುತ್ತಿದೆ ಈ ಹಿನ್ನೆಲೆಯಲ್ಲಿ 51.98ಲಕ್ಷರೂ.ಗಳ ಅನುದಾನ ನೀಡಲಾಗಿದೆ ಓದುಗರಿಗೆ ಅನುಕೂಲವಾಗುವ ಉದ್ದೇಶದಿಂದ ಹಾಗೂ ಶಾಶ್ವತ ಕಟ್ಟಡ ನಿರ್ಮಾಣ ಮಾಡಬೇಕೆನ್ನುವ ಕಾರಣಕ್ಕೆ ಸುಸಜ್ಜಿತ ಗ್ರಂಥಾಲಯ ಮಾಡಲಾಗುತ್ತಿದೆ, ಇಲ್ಲಿ ಓದುಗರಿಗೆ ಎಲ್ಲಾ ಅಗತ್ಯ ಸೌಲಭ್ಯ ಸಿಗಲಿದೆ ಶೀಗ್ರವೇ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಯ ಕೆ.ಕೆ.ಆರ್.ಡಿ.ಬಿ ಮೈಕ್ರೋ ಅಭಿವೃದ್ದಿ ಯೋಜನೆಯಲ್ಲಿ ಕರೆಕಾನಹಳ್ಳಿ ಗ್ರಾಮದಿಂದ ಕಗ್ಗಲಘಟ್ಟ ತಾಂಡಾ ಮತ್ತು ಹರಪನಹಳ್ಳಿ ತಾಲ್ಲೂಕು ಬಾರ್ಡರ್ ರಸ್ತೆಯವೆರೆಗೆ 76.87ಲಕ್ಷ ರೂ.ಗಳ ಕಾಮಗಾರಿ ರಸ್ತೆನಿರ್ಮಾಣ ಹಾಗೂ ಹರಪನಹಳ್ಳಿ ತಾಲ್ಲೂಕು ಕಂಚಿಕೇರಿ, ಬೆಂಡಿಗೇರಿ ಮಾರ್ಗವಾಗಿ ದಾವಣಗೆರೆ ಹೊಳಲು ರಸ್ತೆ ಎಸ್.ಹೆಚ್.ಡಿ.ಪಿ ಅಭಿವೃದ್ದಿ ಯೋಜನೆಯಲ್ಲಿ 20.24ಕೋಟಿ ರೂ.ಗಳ ಅನುದಾನದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದು, ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿ ಮಾಡಬೇಕು ಎಂದು ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ ಹೇಳಿದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಪಿ.ಡಬ್ಲೂ.ಡಿ ಎಇಇ ಪ್ರಕಾಶ್ ಗೌಡ ಪಾಟೀಲ್, ಗ್ರಂಥ ಪಾಲಕ ನಾರಾಯಣದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ ಅಂಜಿನಪ್ಪ, ಪುರಸಭೆ ಸದಸ್ಯರಾದ ಡಿ.ಅಬ್ದುಲ್ ರಹಿಮಾನ್, ಮಂಜುನಾಥ ಇಜಂತಕರ್, ಕಿರಣ್ ಶಾನಬೋಗ್, ಉದ್ದಾರ ಗಣೇಶ್, ಲಾಟಿ ದಾದಾಪೀರ್, ಹುಲಿಕಟ್ಟಿ ಚಂದ್ರಪ್ಪ, ಕಂಚಿಕೇರಿ ಜಯಲಕ್ಷ್ಮೀ, ಎಂ.ಬಿ ಅಂಜಿನಪ್ಪ, ಪಿಡಿಒ ಆನಂದ, ಶಂಕರ್, ಮತ್ತೂರು ಬಸವರಾಜ್, ಓ ಮಹಾಂತೇಶ್, ಸವಣೂರು ಯಲ್ಲಪ್ಪ, ಗುತ್ತಿಗೆದಾರರಾದ ಪ್ರಕಾಶ್, ಚೇತನ್, ಮಂಜುನಾಥ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.