ಡೈಲಿ ವಾರ್ತೆ: 30/OCT/2024

ಬೈಂದೂರು: ಸ್ಕೂಟಿಗೆ ಮಣ್ಣು ತುಂಬಿದ ಲಾರಿ ಡಿಕ್ಕಿ ಹೊಡೆದು ಪಲ್ಟಿ- ಮಣ್ಣಿನಡಿಯಲ್ಲಿ ಸಿಲುಕಿದ ಮಹಿಳೆ – ಸಮಾಜ ಸೇವಕ ಕೋಡಿ ಅಶೋಕ್ ಪೂಜಾರಿಯಿಂದ ಮಹಿಳೆಯ ರಕ್ಷಣೆ

ಬೈಂದೂರು: ಸ್ಕೂಟಿಯಲ್ಲಿ ಸಾಗುತ್ತಿದ್ದ ಮಹಿಳೆಗೆ ಮಣ್ಣು ತುಂಬಿದ ಲಾರಿ ಡಿಕ್ಕಿ ಹೊಡೆದು, ಲಾರಿ ಮಗುಚಿ ಬಿದ್ದು ಮಹಿಳೆ ಮಣ್ಣಿನಡಿ ಸಿಲುಕಿ ಅದೃಷ್ಟವಶಾತ್ ಪಾರಾದ ಘಟನೆ ಅ. 30 ರಂದು ಬುಧವಾರ ಮಧ್ಯಾಹ್ನ ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿಯಲ್ಲಿ ನಡೆದಿದೆ.

ಮಣ್ಣಿನಡಿ ಸಿಲುಕಿದ ಮಹಿಳೆ ಉಪ್ರಳ್ಳಿಯ ಆರತಿ ಶೆಟ್ಟಿ ಎಂದು ತಿಳಿದು ಬಂದಿದೆ.

ಮಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಮಣ್ಣು ಸ್ಕೂಟರಲ್ಲಿದ್ದ ಮಹಿಳೆ ಮೇಲೆ ಬಿದ್ದು ಮಣ್ಣಿನ ಅಡಿಯಲ್ಲಿ ಮಹಿಳೆ ಸಿಲುಕಿ ಕೊಂಡಸಂದರ್ಭ .
ಅಲ್ಲೇ ಸ್ಥಳದಲ್ಲಿ ಇದ್ದ ಸಮಾಜ ಸೇವಕ, ಆಪತ್ಬಾಂಧವ ಕೋಡಿ ಅಶೋಕ ಪೂಜಾರಿ ಅವರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಅಪಘಾತವಾದಾಗ ಸ್ಥಳದಲ್ಲಿ ಯಾರು ಇಲ್ಲದಿರುವುದರಿಂದ ಅಲ್ಲದೆ ಲಾರಿ ಚಾಲಕನಿಗೆ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದು ಆ ವೇಳೆ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಮಹಿಳೆಯನ್ನು ಅಶೋಕ್ ಪೂಜಾರಿ ತನ್ನ ಕೈಗಳಿಂದಲೇ ಮಣ್ಣನ್ನು ಅಗೆದು ಮಹಿಳೆಯನ್ನು ರಕ್ಷಿಸಿ ನಂತರ ಸ್ಥಳೀಯರ ಸಹಕಾರದಿಂದ ಮಣ್ಣಿನಡಿಯಿಂದ ಮಹಿಳೆಯನ್ನು ಮೇಲೆತ್ತಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕ್ಲಪ್ತ ಸಮಯದಲ್ಲಿ ಮಹಿಳೆಯನ್ನು ರಕ್ಷಿಸಿ ಜೀವ ಉಳಿಸಿದ ಸಮಾಜ ಸೇವಕ ಕೋಡಿ ಅಶೋಕ್ ಪೂಜಾರಿ ಅವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.