ಡೈಲಿ ವಾರ್ತೆ: 30/OCT/2024
ಕೋಟೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಪ್ರಾಂಶುಪಾಲರಾಗಿ ರಾಮರಾಯ ಆಚಾರ್ಯ ಆಯ್ಕೆ
ಕುಂದಾಪುರ: ಕೋಟೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಪ್ರಾಂಶುಪಾಲರಾಗಿ
ರಾಮರಾಯ ಆಚಾರ್ಯ ಅವರು ಆಯ್ಕೆಯಾಗಿದ್ದಾರೆ.
ಅವರು ಕೋಟೇಶ್ವರ ಕುಂದಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ರಾಮರಾಯ ಆಚಾರ್ಯ ಅವರು ಕಾಲೇಜಿನ ಹೊಸ ಪ್ರಾಂಶುಪಾಲರಾಗಿ ಆಯ್ಕೆಯಾಗಿದ್ದು, ಈ ಸುದ್ದಿ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪಾಲಕರಿಗೆ ಸಂತಸಕ್ಕೆ ಕಾರಣವಾಗಿದೆ.
ಹಿರಿಯ ಪ್ರಾಧ್ಯಾಪಕರಾದ ಶೇಖರ್ ಬಿ, ಗ್ರಂಥಪಾಲಕರು ರವಿಚಂದ್ರ, ನಾಗರಾಜ್ ಯೂ, ವಿನಯಚಂದ್ರ,ಭಾಗೀರಥಿ, ವರಧರಾಜ್,ಪ್ರಜ್ವಲ, ರೋಹಿಣಿ, ಕುಮಾರ್ ದೊಡ್ಡಮನಿ ಮತ್ತು ಎಲ್ಲಾ ಬೋಧಕ ಹಾಗೂ ಬೋಧಕೆತರ ಸಿಬ್ಬಂದಿಗಳು ಹೊಸ ಪ್ರಾಂಶುಪಾಲರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಉತ್ತಮ ವಾಗ್ಮಿಯಾಗಿರುವ ರಾಮರಾಯ ಆಚಾರ್ಯ ಅವರು ವಿದ್ಯಾರ್ಥಿಗಳೊಂದಿಗೆ ಸುಲಭವಾಗಿ ಬೆರೆಯುವ ಸಾಮರ್ಥ್ಯ ಹೊಂದಿದ್ದು, ಅವರ ಮಾರ್ಗದರ್ಶನದಲ್ಲಿ ಕಾಲೇಜು ಹೊಸ ಎತ್ತರಕ್ಕೆ ಏರುವ ನಿರೀಕ್ಷೆ ಇದೆ. ಅವರು ಶಿಸ್ತು ಕಾಪಾಡುದು , ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಸುಧಾರಿಸಲು ಹಲವು ಹೊಸ ಕ್ರಮಗಳನ್ನು ಕೈಗೊಳ್ಳುವ ಉತ್ತಮ ನಾಯಕತ್ವ ಹೊಂದಿದ್ದಾರೆ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿ, ಅವರು ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಲು ಸಹಾಯ ಮಾಡುವರು. ಇವರ ನಾಯಕತ್ವದಲ್ಲ ಕಾಲೇಜು ಶೈಕ್ಷಣಿಕ ಕ್ರೀಡಾ ಮತ್ತು ಸಂಸ್ಕೃತಿಕ ಬೆಳವಣಿಗೆ ಅವರ ಅನುಭವದಿಂದ ಮತ್ತು ಜ್ಞಾನದಿಂದ ಕಾಲೇಜಿನ ಸರ್ವಾಂಗೀನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹಿರಿಯ ಪ್ರಧ್ಯಾಪಕರಾದ ಶೇಖರ್ ಬಿ ಹೇಳಿದರು.