ಡೈಲಿ ವಾರ್ತೆ:23/DEC/2024

ಬೈಂದೂರು: ಸರಕಾರಿ ಶಾಲಾ ಮಕ್ಕಳ ವಾರ್ಷಿಕೋತ್ಸವ: ಪೋಷಕರಲ್ಲಿ ಕಳವಳ!

ಬೈಂದೂರು: ರಾಜ್ಯ ಸರ್ಕಾರ ಪ್ರತಿವರ್ಷದಂತೆ ಜರುಗುವ ವಾರ್ಷಿಕೋತ್ಸವ, ಹಾಗೂ ಶೈಕ್ಷಣಿಕ ಪ್ರವಾಸ ಡಿಸೆಂಬರ್ 31 ರ ಒಳಗೆ ಕಾರ್ಯಕ್ರಮ ಮುಗಿಸಬೇಕೆಂದು ಎಲ್ಲಾ ಸರಕಾರಿ ಶಾಲೆಗಳಿಗೆ ಆದೇಶ ಮಾಡಿದೆ ಎನ್ನಲಾಗುತ್ತಿದೆ?

ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಂತೆ ಶಾಲಾ ವಾರ್ಷಿಕೋತ್ಸವ ಶಾಲೆಯ SDMC ನೇತೃತ್ವದಲ್ಲಿ ಎಲ್ಲಾ ಪೂರ್ವ ಸಿದ್ಧತೆಗಳು ನಡೆಯುತ್ತಿವೆ, ಆದರೆ ಮಕ್ಕಳ ಪೋಷಕರಲ್ಲಿ ಕಳವಳ ಹೆಚ್ಚಾಗಿದ್ದಂತೂ ಸತ್ಯ!!

ಕಾರ್ಯಕ್ರಮದ ವಿವರ: ಒಂದು ಗ್ರಾಮೀಣ ಭಾಗದ ಗ್ರಾಮದಲ್ಲಿ ನಾಲ್ಕು ಸರಕಾರಿ ಶಾಲೆಗಳಲ್ಲಿ ಒಂದೇ ದಿನ ಒಂದೇ ಸಮಯ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಎರಡು ಮಕ್ಕಳು ಬೇರೆ ಬೇರೆ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದು ಒಂದೇ ದಿನ ಒಂದೇ ಸಮಯದಲ್ಲಿ ಕಾರ್ಯಕ್ರಮ ಜರುಗಿದರೆ ಮಕ್ಕಳ ಪೋಷಕರು ಯಾವ ಶಾಲೆಗೆ ಹೋಗ ಬೇಕೆನ್ನುವುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ ಪೋಷಕರಲ್ಲಿ,

ಇಂಥಾ ವಾರ್ಷಿಕೋತ್ಸವ ಯಾರ ಪ್ರತಿಷ್ಠೆಗಾಗಿ ಮಾಡುತ್ತಿದ್ದಾರೆ ಎಂದು ಗುಸು ಗುಸು ಮಾತು ಕೇಳಿ ಬರುತ್ತಿದೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಗಮನಹರಿಸಿ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ಪೋಷಕರ ಅಭಿಪ್ರಾಯವಾಗಿದೆ,

ಕೂಡಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂದಿನ ದಿನದಲ್ಲಿ ಇಂತಹ ಕಾರ್ಯಕ್ರಮ ಸೂಕ್ಷ್ಮವಾಗಿ ಪರಿಗಣಿಸಿ ಸರಕಾರದ ಆದೇಶ ನೇರವಾಗಿ ಶಿಕ್ಷಕರಿಗೆ ನೀಡಬೇಕು, ಹಾಗೂ ಸರಕಾರಿ ಶಾಲೆಗಳು ಉಳಿಯಬೇಕು ಎಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸ ಬೇಕೆನ್ನುವುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ.