ಡೈಲಿ ವಾರ್ತೆ: 07/JAN/2025

ಮಿತ್ತೂರು ಸಿರಾಜುಲ್ ಹುದಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಕೆ.ಬಿ. ಮಹಮ್ಮದ್ ಸಲೀಂ ನಾಲ್ಕನೇ ಬಾರಿಗೆ ಪುನರಾಯ್ಕೆ

ಬಂಟ್ವಾಳ : ಮಿತ್ತೂರು ಸಿರಾಜುಲ್ ಹುದಾ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಕೆ.ಬಿ. ಮಹಮ್ಮದ್ ಸಲೀಂ ನಾಲ್ಕನೇ ಬಾರಿಗೆ ಪುನರಾಯ್ಕೆ ಗೊಂಡಿದ್ದಾರೆ.

ಮಸೀದಿ ಗೌರವಾಧ್ಯಕ್ಷ ಕೆ.ಬಿ.ಖಾಸಿಂ ಹಾಜಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮಸೀದಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಮಸೀದಿ ಖತೀಬ್ ಇಬ್ರಾಹಿಂ ದಾರಿಮಿ ಕಡಬ ದು:ಹಾ ನೆರವೇರಿಸಿದರು. ಕಾರ್ಯದರ್ಶಿ ಹಂಝ ಖಂದಕ್ 2024 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಬಳಿಕ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಾಧ್ಯಕ್ಷರಾಗಿ ಹಾಜಿ ಅಬ್ದುಲ್ ಅಝೀಜ್ ಮಿತ್ತೂರು, ಅದ್ಯಕ್ಷರಾಗಿ ಕೆ.ಬಿ.ಮಹಮ್ಮದ್ ಸಲೀಂ, ಉಪಾಧ್ಯಕ್ಷರಾಗಿ ಮಹಮ್ಮದ್ ಶರೀಫ್ ಖಂದಕ್, ಪ್ರದಾನ ಕಾರ್ಯದರ್ಶಿಯಾಗಿ ಹಂಝ ಖಂದಕ್, ಜೊತೆ ಕಾರ್ಯದರ್ಶಿಯಾಗಿ ಸಾದಿಕ್ ಅಕ್ಕರೆ, ಸಿದ್ದೀಕ್ ಮಿತ್ತೂರು, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಹಾಜಿ, ಲೆಕ್ಕ ಪರಿಶೋಧಕರಾಗಿ ಕೆ.ಬಿ. ಕಾಸಿಂ ಹಾಜಿ, ಅವರು ಆಯ್ಕೆಯಾದರು. ಹಾಗೂ 16 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.