ಡೈಲಿ ವಾರ್ತೆ: 11/JAN/2025

ಕೋಟತಟ್ಟು ಗ್ರಾ. ಪಂ. ನ 2024-25ನೇ ಸಾಲಿನ ಮಕ್ಕಳ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಮಕ್ಕಳ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆಯು ದಿನಾಂಕ 10-01-2025ರ ಶುಕ್ರವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟತಟ್ಟು ಪಡುಕರೆಯಲ್ಲಿ ಅಧ್ಯಕ್ಷರಾದ ಶ್ರೀ ಕೆ ಸತೀಶ್ ಕುಂದರ್ ಬಾರಿಕೆರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಕೋಟ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ| ವಿಶ್ವನಾಥ ಬಿ ಅವರು ಮಾತನಾಡಿ ಮಕ್ಕಳಿಗೆ ಆರೋಗ್ಯದ ಸಲಹೆಯನ್ನು ನೀಡಿದರು.

ವಕೀಲರು ಹಾಗೂ ಪಂಚಾಯತ್ ಸದಸ್ಯರಾದ ಶ್ರೀ ಹೆಚ್ ಪ್ರಮೋದ್ ಹಂದೆ ಅವರು ಮಾತನಾಡಿ ಮಕ್ಕಳಿಗೆ ಕಾನೂನು ಸಲಹೆ ಮತ್ತು ಒಳ್ಳೆಯ ಸ್ಪರ್ಶ ಕೆಟ್ಟ ಸ್ಪರ್ಶದ ಬಗ್ಗೆ ಮಾಹಿತಿ ನೀಡಿದರು..

ವಿವೇಕ ಬಾಲಕರ ಪ್ರೌಢ ಶಾಲೆಯ ವಿದ್ಯಾರ್ಥಿ ರೋಶನ್ ಅವರು ಶಾಲೆಯ ಸಮೀಪ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನಸಂದಣಿ ಇರುವುದರಿಂದ ಶಾಲೆ ವಿದ್ಯಾರ್ಥಿಗಳ ಹಿತದೃಷ್ಟಯಿಂದ ಪೊಲೀಸ್ ವ್ಯವಸ್ಥೆ ಮಾಡಿಸಲು ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಣ್ಣು ಹಾಕಿಸಲು ಬೇಡಿಕೆ , ಸ್ವಾತಂತ್ರ್ಯ ದಿನಾಚರಣೆಗೆ ಸಿಹಿತಿಂಡಿ , ಓರ್ವ ಶಾಲಾ ವಿಕಲಚೇತನ ವಿದ್ಯಾರ್ಥಿಗೆ ವೀಲ್ ಚೇರ್ ಅನ್ನು ಬೇಡಿಕೆ ನೀಡಿದರು ಹಾಗೂ ಕೋಟತಟ್ಟು ಪಡುಕರೆ ಶಾಲೆಯ ವಿದ್ಯಾರ್ಥಿಗಳು ಶಾಲಾ ಆಟದ ಮೈದಾನಕ್ಕೆ ಮಣ್ಣು ಹಾಕಲು ಹಾಗೂ ವಾಚನಾಲಯ ಬೇಡಿಕೆ ನೀಡಿದರು ಅಧ್ಯಕ್ಷರಾದ ಶ್ರೀ ಸತೀಶ್ ಕುಂದರ್ ಬಾರಿಕೆರೆ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ಸತೀಶ್ ಕುಂದರ್ ಬಾರಿಕೆರೆ ಅವರು ಮಾತನಾಡಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಭೆ ಗಳ ಬಗ್ಗೆ ಮಾಹಿತಿ ಮತ್ತು ಸಭೆ ನಿರ್ವಹಿಸುವ ದೈರ್ಯ ಬರುತ್ತದೆ, ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಹಾಗೂ ಯಾವುದೇ ಇನ್ನಿತರ ಶಾಲೆಗಳಿಗೆ ಸಂಬಂದಿಸಿದ ಬೇಡಿಕೆಗಳಿದ್ದಲ್ಲಿ ಈಡೇರಿಸಲು ಗ್ರಾಮ ಪಂಚಾಯತ್ ಸಹಕಾರ ನೀಡುವುದೆಂದು ತಿಳಿಸಿದರು..

ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಸರಸ್ವತಿ, ಸದಸ್ಯರಾದ ಶ್ರೀಮತಿ ವಿದ್ಯಾ, ಪಶು ಆಸ್ಪತ್ರೆ ಕೋಟದ ವೈದ್ಯಾಧಿಕಾರಿ ಹಾಗೂ ನೋಡೆಲ್ ಅಧಿಕಾರಿಗಳಾದ ಡಾ|ಅನಿಲ್ ಕುಮಾರ್ ಎಚ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಲಕ್ಷ್ಮೀ, ಕೋಟತಟ್ಟು ಪಡುಕರೆ ಶಾಲೆಯ ಸಿಡಿಎಂಸಿ ಅಧ್ಯಕ್ಷರಾದ ಶ್ರೀ ಸುಲೇಮಾನ್, ಕೋಟತಟ್ಟು, ಕೋಟತಟ್ಟು ಪಡುಕರೆ ಶಾಲೆಯ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು, ವಿವೇಕ ಬಾಲಕರ ಪ್ರೌಡ ಶಾಲೆಯ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಸಾರ್ವಜನಿಕರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು..

ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್ ಸ್ವಾಗತಿಸಿದರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರವೀಂದ್ರ ರಾವ್ ಅವರು ಕಾರ್ಯಕ್ರಮ ನಿರೂಪಿಸಿದರು..