ಡೈಲಿ ವಾರ್ತೆ: 14/JAN/2025

ಗಂಗಾವಳಿ| ಜನವರಿ 21 ರಿಂದ 26ರ ವರೆಗೆ ಮೂಹಿಯುದ್ದಿನ್ ಜಾಮಿಯಾ ಮಸೀದಿಯ ವಾರ್ಷಿಕೋತ್ಸವ ಹಾಗೂ ಪಳ್ಳಿ ನೆೇರ್ಚೆ

ಗಂಗಾವಳಿ: ಮೂಹಿಯುದ್ದಿನ್ ಜಾಮಿಯಾ ಮಸೀದಿ ಯ ವಾರ್ಷಿಕೋತ್ಸವ ಹಾಗು ವರ್ಷಾಂಪತಿ ಆಚರಿಸಿಕೊಂಡು ಬರುವ ಪಳ್ಳಿ ನೆೇರ್ಚೆ ಕಾರ್ಯಕ್ರಮವು ಮಸೀದಿಯ ಗೌರವಾಧ್ಯಕ್ಷರಾದ ಖುದುವತುಸ್ವಾದಾತ್ ಆಸಯ್ಯದ್ ಅಲ್ಹಾಜ್ ಕೆ. ಎಸ್. ಮುಹಮ್ಮದ್ ಆಟಕೋಯಾ ತಂಗಳ್ ಇವರ ಸಾರತ್ಯದಲ್ಲಿ ಜನವರಿ 21 ಕ್ಕೆ ಪ್ರಾರಂಭಗೊಂಡು 26 ಕ್ಕೆ ಕೊನೆಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಹಲವಾರು ಉಲೇಮಾ ಉಮರಾ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಸಯ್ಯದ್ ಅಲವಿ ತಂಗಳ್ ಕರ್ಕಿ. ರಿಫಾಯಿಯಾ ಮದ್ಹ್ ಅರಬನ ಮುಟ್ ಹಾಗು ಮದ್ಹ್ ಗಳನ್ನು ಹಾಡಲು ಕೇರಳದ ಕೋಯಾ ಕಾಪಾಡ್ ಹಾಗು 2 ದಿನಗಳ ಮತ ಪ್ರಭಾಷಣ ಕ್ಕಾಗಿ ಉಸ್ತಾದರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಕೊನೆಯ ದಿನ ತಬರೂಕ್ ಆಗಿ ಅನ್ನದಾನ ಕಾರ್ಯಕ್ರಮ ಇರುತ್ತದೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೆ ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಬೇಕಾಗಿ ಅಹ್ವಾನಿಸುತ್ತಿದ್ದೇವೆ.
ಎಂ.ಜೆ.ಎಂ ಆಡಳಿತ ಕಮಿಟಿ. ಗಂಗಾವಳಿ.