ಜ. 17 ರಿಂದ ಜ. 21ರ ವರೆಗೆ ಶ್ರೀ ಮಹಾಸತೀಶ್ವರಿ ಮಾಸ್ತಿ ಅಮ್ಮನವರ ದೇವಸ್ಥಾನ ಕೋಡಿ ಕನ್ಯಾಣ ಇದರ ವಾರ್ಷಿಕ ಜಾತ್ರಾ ಮಹೋತ್ಸವ

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣದ ಶ್ರೀ ಮಹಾಸತೀಶ್ವರಿ ಮಾಸ್ತಿ ಅಮ್ಮನವರ ದೇವಸ್ಥಾನ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 17 ರಿಂದ ಜನವರಿ 21ರ ವರೆಗೆ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು
17-01-2025 ಪೂರ್ವಾಹ್ನ 9:00ಕ್ಕೆ ಶ್ರೀ ದೇವಿಗೆ ಚತುರ್ವಿಂಶತಿ ಪರಿಕಲಶೈ: ಸಹ ಪ್ರಧಾನ ಕಲಶ ಸ್ಥಾಪನ, ಅಧಿವಾಸ ಹೋಮ, ಕಲಾತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ.
ಮಹಾ ಪ್ರಸಾದ ವಿತರಣೆ
ಮಧ್ಯಾಹ್ನ 12:30ಕ್ಕೆ
ಅನ್ನ ಸಂತರ್ಪಣೆ

18-01-2025ನೇ ಶನಿವಾರ ಬೆಳಿಗ್ಗೆ 9:30ಗಂಟೆಗೆ
ಗಣಹೋಮ

ರಾತ್ರಿ ಗಂಟೆ 8:00ಕ್ಕೆ
ರಂಗಪೂಜೆ, ತುಳಸಿ ಪೂಜೆ
ರಾತ್ರಿ 10:30ಕ್ಕೆ
ಗೆಂಡ ಸೇವೆ, ಅನ್ನ ಸಂತರ್ಪಣೆ

19-01-2025ನೇ ರವಿವಾರ
ಮಹಾಮಂಗಳಾರತಿ
ಗಂಟೆ 9:30ರಿಂದ
ಸೂರ್ಯೋದಯಕ್ಕೆ
ಮಂಡಲ ಪೂಜೆ

12:0000
ಹಣ್ಣುಕಾಯಿ, ತುಲಾಭಾರಾದಿ ಹರಕೆಗಳು, ಅನ್ನ ಸಂತರ್ಪಣೆ

ಗಂಟೆ 2:00ಕ್ಕೆ
ಮಹಾಮಂಗಳಾರತಿ, ಮಹಾಬಲಿಪೂಜೆ, ಶೆಡಿ ಪೂಜೆ
(ಮುಳ್ಳು ಹಾವಿಗೆ ದರ್ಶನ), ಬೆನಗಲ್ಲು ಪೂಜೆ, ಜೋಗಿ ಪುರುಷನ ದರ್ಶನ, ಬಾಗಿಲು ಬೊಬ್ಬರ್ಯನ ದರ್ಶನ, ಅಜ್ಜಮ್ಮ ದೇವರಿಗೆ ಪುಷ್ಪಾರ್ಚನೆ

20-01-2025ನೇ ಸೋಮವಾರ
ಬೆಳಿಗ್ಗೆ ಗಂಟೆ 10:00ಕ್ಕೆ
ಶುದ್ದ ಪೂಜೆ

ಮಧ್ಯಾಹ್ನ ಗಂಟೆ 12:30ಕ್ಕೆ
ಹಸಲ ದೈವಕ್ಕೆ ಹರಕೆ ಸಲ್ಲಿಕೆ
ರಾತ್ರಿ ಗಂಟೆ 9:30ಕ್ಕೆ
ಕೋಳೆಯರಮಾವನ ಹರಕೆ ಸಲ್ಲಿಸುವುದು ಮಲೆಸಾವರಿ ಮತ್ತು ಪರಿವಾರ ದೈವಗಳ
ಕೋಲ ಪ್ರಾರಂಭ

21-01-2025ನೇ ಮಂಗಳವಾರ
ಪ್ರಾತಃಕಾಲ ಗಂಟೆ 6:00ಕ್ಕೆ
ಮಲೆಸಾವರಿ ದೈವ ದರ್ಶನ
ಹರಕೆ ಸೇವೆಗಳ ಕೇಳಿಕೆ, ಸಂಜೆ ಮಹಾಪ್ರಸಾದ ವಿತರಣೆ

ರಾತ್ರಿ 8:30ಕ್ಕೆ
ಯಕ್ಷಗಾನ ಬಯಲಾಟ (ಕಾಲ ಮಿತಿ)

18.01.2025ನೇ ಶನಿವಾರ
ಭಜನಾ ಸಂಕೀರ್ತನೆ
ಸಂಜೆ 7:00 ಗಂಟೆಗೆ ಶ್ರೀ ಮಹಾಸತೀಶ್ವರೀ ಭಜನಾ ಮಂಡಳಿ ಕೋಡಿ-ಕನ್ಯಾಣ ಇದರ ಸದಸ್ಯರಿಂದ ಭಜನೆ.

ವಿಶೇಷ ಸೂಚನೆ
ದಿನಾಂಕ 18-01-2025ನೇ ಶನಿವಾರ ರಾತ್ರಿ ಹಾಗೂ ದಿನಾಂಕ 19-01-2025ನೇ ರವಿವಾರ ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಅನ್ನಸಂತರ್ಪಣೆಯ ಬಗ್ಗೆ ಅಕ್ಕಿ, ತೆಂಗಿನಕಾಯಿ, ಬೆಲ್ಲ ಇತ್ಯಾದಿ ಹೊರೆ ಕಾಣಿಕೆಗಳನ್ನು 18-01-2025ರಂದು ಆದರ ಪೂರ್ವಕವಾಗಿ ಸ್ವೀಕರಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮ
ದಿನಾಂಕ 19.01.2025ನೇ ರವಿವಾರ
ಸಂಜೆ 07:00 ಗಂಟೆಯಿಂದ ಪ್ರಗತಿ ಯುವಕ ಸಂಘದ ಸದಸ್ಯರಿಂದ
ಮನೋರಂಜನಾ ಕಾರ್ಯಕ್ರಮ

ದಿನಾಂಕ 21.01.2025ನೇ ಮಂಗಳವಾರ
ರಾತ್ರಿ 08:00ಕ್ಕೆ
ಯಕ್ಷಗಾನ ಬಯಲಾಟ
ಶ್ರೀ ಮಹಿಷಮರ್ದಿನೀ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ನೀಲಾವರ ಇವರಿಂದ ಕಾಲಮಿತಿ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಪ್ರಕಟಿಸಿದ್ದಾರೆ.