ಡೈಲಿ ವಾರ್ತೆ: 21/ಫೆ. /2025

ಕೊರಗ ಆದಿವಾಸಿ ಕರಕುಶಲ ವಸ್ತುಗಳ ಮಳಿಗೆಗೆ ಯು. ಟಿ ಖಾದರ್ ಭೇಟಿ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಣಾಜೆಯಲ್ಲಿ ನಡೆಯುತ್ತಿರುವ ಎರಡು ದಿನಗಳ ದಕ್ಷಿಣ ಕನ್ನಡ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊರಗ ಆದಿವಾಸಿ ಕರಕುಶಲ ವಸ್ತುಗಳ ಮಳಿಗೆಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರಗ ಕರಕುಶಲ ವಸ್ತುಗಳ ಮಳಿಗೆಯ ಮುಂದಾಳತ್ವವನ್ನು ಕೊರಗ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ ವಹಿಸಿದ್ದರೆ, ಒಟ್ಟು ಜವಾಬ್ದಾರಿಯನ್ನು ನರಸಿಂಹ ಪೆರ್ಡೂರು ಮತ್ತು ಸುಪ್ರಿಯಾ ಕಿನ್ನಿಗೋಳಿ ನಿರ್ವಹಿಸಿದರು.