ಡೈಲಿ ವಾರ್ತೆ: 24/ಫೆ. /2025

ಬಿಲಾಲ್ ಜುಮಾ ಮಸ್ಜಿದ್(ರಿ) ಎಂ ಕೋಡಿ, ಕುಂದಾಪುರ ಇದರ 28ನೇ ಸ್ವಲಾತ್ ಮಜ್ಲೀಸ್ ಹಾಗೂ ಅಸ್‌ಹಾಬುಲ್ ಬದ್ರ್ ಅಂಡ್‌ ನೇರ್ಚೆ

ಕುಂದಾಪುರ| ಬಿಲಾಲ್ ಜುಮುಅ ಮಸ್ಜಿದ್
(ರಿ) ಎಂ ಕೋಡಿ, ಕುಂದಾಪುರ ಇದರ 28ನೇ ಸ್ವಲಾತ್
ಮಜ್ಲೀಸ್ ಹಾಗೂ ಅಸ್‌ಹಾಬುಲ್ ಬದ್ರ್ ಅಂಡ್‌ ನೇರ್ಚೆ ಫೆ. 24, 25 ರಂದು ಕೆ. ಎಂ ಅಬ್ದುರ್ರಹ್ಮಾನ್ ಸಖಾಫಿ ಇವರ ಸಾರಥ್ಯದಲ್ಲಿ ನಡೆಯುತ್ತಿದೆ.

ದಿನಾಂಕ 24/02/2025 ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಕುಂದಾಪುರ ಹಝ್ರತ್ ಸುಲ್ತಾನ್ ಅಸ್ಸಯ್ಯದ್ ಯೂಸುಫ್ ವಲಿಯುಲ್ಲಾಹಿ (ಖ.ಸಿ) ಮಖಾಮ್ ಝಿಯಾರತ್ ನಡೆಯಿತು.
ಸಂಜೆ 4: 30 ಕ್ಕೆ
ಬಿಲಾಲ್‌ ಜುಮಾ ಮಸೀದಿ (ರಿ.) ಎಂ. ಕೋಡಿ, ಕುಂದಾಪುರ ಇದರ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಅಲೀ ಸಾಹೇಬ್ ಇವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೆ ಎಂ ಅಬ್ದುರ್ರಹ್ಮಾನ್ ಸಖಾಫಿ, ಕೆ ಬಿ ಅಬ್ದುಲ್ ಹಮೀದ್ ಮುಸ್ಲಿಯಾರ್,ಅಝ್ಹರುದ್ದೀನ್ ಹನೀಫಿ, ಗೌರವ ಅಧ್ಯಕ್ಷರು G ಹಸೈನಾರ್, ಕಾರ್ಯದರ್ಶಿ ಮೊಹಿದ್ದೀನ್, ಖಜಾಂಜಿ ಕೆ ಎ ಮಹಮ್ಮದ್, ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಕೋಡಿ ಉಪಸ್ಥಿತರಿದ್ದರು.

ರಾತ್ರಿ 8.00 ಗಂಟೆಗೆ ಬಹು: ಅಸ್ಸಯಿದ್ ಜಮಲುಲೈಲಿ ತಂಙಳ್ ಕಾಜೂರು ನೇತೃತ್ವದಲ್ಲಿ ಬೃಹತ್ ಸಲಾತ್ ಮಜ್ಲೀಸ್ ನಡೆಯಿತು.

ದಿನಾಂಕ:25/02/2025 ಮಂಗಳವಾರ
ಮಗ್‌ರಿಬ್ ನಮಾಝ್ ನಂತರ ಅಸ್ಸಯ್ಯದ್ ಜಅಫರ್ ಸಾದಿಖ್ ತಂಙಲ್ ಕೋಟೇಶ್ವರ ಅವರಿಂದ ದುವಾ ನಡೆಯಲಿದೆ.
ಬಹು. ಸೂಫಿವರ್ಯರಾದ ಅಲ್‌ಹಾಜ್ ಮಹ್ ಮೂದುಲ್ ಫೈಝಿ ಅವರ ನೇತೃತ್ವದಲ್ಲಿ ಮೌಲಿದ್ ಮಜ್ಲೀಸ್ ನಡೆಯಲಿದೆ ಎಂದು ಬಿಲಾಲ್ ಜುಮಾ ಮಸೀದಿ ಆಡಳಿತ ಕಮಿಟಿಯವರು ತಿಳಿಸಿದ್ದಾರೆ.