ಡೈಲಿ ವಾರ್ತೆ: 26/ಫೆ. /2025

ಕುಂದಾಪುರ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ ಪ್ರಭಾಕರ ಅವರಿಗೆ ಸನ್ಮಾನ

ಕುಂದಾಪುರ ಪುರಸಭೆಯ ಸ್ಟಾಯಿ ಸಮಿತಿಯ ಅಧ್ಯಕ್ಷ ವಿ ಪ್ರಭಾಕರ ಕುಂದಾಪುರ ಇವರನ್ನು ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ನ ವತಿಯಿಂದ NNOCCK ಮಿನಿ ಹಾಲ್ ನಲ್ಲಿ ನಮ್ಮ ನಾಡ ಒಕ್ಕೂಟ ಉಡುಪಿ ಘಟಕದ ಮಾಜಿ ಉಪಾಧ್ಯಕ್ಷ ರಾದ ಮೊಹಮ್ಮದ್ ಇರ್ಷಾದ್ ರವರು ಸನ್ಮಾನಿಸಿದರು.

ಸಭಾಧ್ಯಕ್ಷತೆಯನ್ನು ಎನ್ ಎನ್ ಒ ಕಮ್ಯುನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ವಹಿಸಿದರು.

ಈ ಸಂದರ್ಭದಲ್ಲಿ ಎನ್ ಎನ್ ಒ ಕೇಂದ್ರ ಸಮಿತಿಯ ಖಜಾಂಚಿ ಪೀರು ಸಾಹೇಬ್,ಕುಂದಾಪುರ ಎನ್ ಎನ್ ಒ ಉಡುಪಿ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್ ನಾಖುದಾ, ಸದ್ಯಸ್ಯರಾದ ಶಾಬಾನ್ ಹಂಗಳೂರ್, ಮುನಾಫ್ ಕಂಡ್ಲೂರ್, ಮೊಹಮ್ಮದ್ ಗುಲ್ವಾಡಿ,ಅಬೂಬಕ್ಕರ್ ಮಾವಿನಕಟ್ಟೆ,ಅಕ್ರಮ್ ಉಡುಪಿ, ಹ್ಯಾರಿಸ್ ಹೆಮ್ಮಾಡಿ ಕಾರ್ಯಕ್ರಮ ದ ಸಂಚಾಲಕರಾದ ಜಮಾಲ್ ಗುಲ್ವಾಡಿ, ಸಹ ಸಂಚಾಲಕರಾದ ಮುನಾಫ್ ಕೋಡಿ, ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಅಬು ಮೊಹಮ್ಮದ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.