ಡೈಲಿ ವಾರ್ತೆ: 22/MAY/2025

ಹಂಗಾರಕಟ್ಟೆ| ಮೀನುಗಾರ ಬೋಟಿನಲ್ಲೇ ಕುಸಿದು ಬಿದ್ದು ಸಾವು!

ಕೋಟ: ಮೀನಗಾರನೋರ್ವ ಬೋಟಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ (ಬಂದರ್)ನಲ್ಲಿ ನಡೆದಿದೆ.

ಮೃತರನ್ನು ಗೋಪಾಡಿ ಗ್ರಾಮದ ಗೋವಿಂದ (62) ಎಂದು ಗುರುತಿಸಲಾಗಿದೆ.

ಗೋವಿಂದ ಅವರು ಚಾಮುಂಡೇಶ್ವರಿ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದು 15 ದಿನಗಳಿಗೊಮ್ಮೆ ರಜೆಯಲ್ಲಿ ಮನೆಗೆ ಹೋಗಿ ಬರುತ್ತಿದ್ದರು. ಮಂಗಳವಾರ ಮುಂಜಾನೆ ಮೀನು ಹಿಡಿಯಲು ತೆರಳಲು ತಯಾರಿ ಸಲುವಾಗಿ ಬಲೆ ಸರಿ ಮಾಡುತ್ತಿರುವಾಗ ಬೋಟ್ ಒಳಗಡೆ ಕುಸಿದುಬಿದ್ದಾಗ ಸಹ ಕೆಲಸಗಾರರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.