ಡೈಲಿ ವಾರ್ತೆ: 18/JUNE/2025

ಕೋಟ| ಹಳೆ‌ ಆರೋಪಿ ಬಂಧನ!

ಕೋಟ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಳೆ ಆರೋಪಿಯನ್ನು ಶಿಕಾರಿಪುರದಲ್ಲಿ ಬಂಧಿಸಲಾಗಿದೆ.

ಮಂಜು ಬಂಧನಕ್ಕೊಳಗಾದ ಆರೋಪಿ.
ಕೋಟ ಪೊಲೀಸ್ ಠಾಣೆ ಸದ್ರಿ ಆರೋಪಿ ಮಂಜು 2019ರಲ್ಲಿ ಕೋಟ ಠಾಣೆಯ ಕಸ್ಟಡಿಯಿಂದ ತಪ್ಪಿಸಿಕೊಂಡ್ಡಿದ್ದ. ಕೋಟ ಪೊಲೀಸ್ ಠಾಣಾ ಅಕ್ರ 43/2019 U/s MMRD ಹಾಗೂ 379 ಐಪಿಸಿ ಹಾಗೂ CR NO 44/2019 U/s 353 224 ಆರೋಪಿಯಾಗಿದ್ದು ಆರೋಪಿಯು ಸುಮಾರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿದ್ದ. ಆರೋಪಿ ವಿರುದ್ಧ ನ್ಯಾಯಾಲಯವು ದಸ್ತಗಿರಿ ಆದೇಶ ಹೊರಡಿಸಿದ್ದು ಅದರಂತೆ ಕೋಟ ಪೊಲೀಸ್ ಠಾಣಾ ಉಪನಿರೀಕ್ಷಕರಾದ ರಾಘವೇಂದ್ರ ಸಿ. ಅವರ ಮಾರ್ಗದರ್ಶನದಂತೆ ಮಂಗಳವಾರ ಕೋಟ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಕೃಷ್ಣ ಹಾಗು ಸಿಬ್ಬಂದಿ ದುಂಡಪ್ಪ ಗೌರಣಿ ಅವರು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಬುಧವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ