


ಡೈಲಿ ವಾರ್ತೆ: 16/ಜುಲೈ/2025


ಹೊಸಂಗಡಿ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ರಚನೆ

ಹೊಸಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ ಇಲ್ಲಿನ 2025 -26 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕ ಹಾಗೂ ನಾಯಕಿಯ ಆಯ್ಕೆ, ಪದಾಧಿಕಾರಿಗಳ ಆಯ್ಕೆ ವಿದ್ಯಾರ್ಥಿ ಸಂಸತ್ತು ರಚನೆ ಮತ್ತು ಮಂತ್ರಿಮಂಡಲದ ರಚನೆ ( Cabinet Formation) ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
ಭಾರತೀಯ ಚುನಾವಣಾ ಮಾದರಿಯ ಕುರಿತು ವಿದ್ಯಾರ್ಥಿಗಳಿಗೆ ಪ್ರಾತಕ್ಷಿಕೆ ನೀಡುವುದರ ಜೊತೆಗೆ, ಚುನಾವಣೆಯ ಬಗ್ಗೆ ನೇರ ಅನುಭವ ನೀಡಬೇಕು ಎಂಬ ಆಕಾಂಕ್ಷೆಯೊಂದಿಗೆ ಎಲ್ಲವೂ ಕೂಡಾ ಭಾರತೀಯ ಚುನಾವಣಾ ಆಯೋಗದ ವಿದಿ ವಿಧಾನದಂತೆ ಮಾಡಲಾಯತು. ಚುನಾವಣಾ ನೀತಿ ಸಂಹಿತೆ ಹಾಗೂ ನಡಾವಳಿಗಳು. ಸ್ಪರ್ಧಿಸಲು ಬೇಕಾದ ಆರ್ಹತೆಗಳು, ನಾಮ ಪತ್ರ ಸಲ್ಲಿಕೆ, ನಾಮ ಪತ್ರ ಹಿಂತೆಗೆತ, ನೀತಿ ಸಂಹಿತೆ ಅಡಿಯಲ್ಲಿ ಪ್ರಚಾರ, ಬಹಿರಂಗ ಮತಪ್ರಚಾರ ಅಂತ್ಯ ಹೀಗೆ ಎಲ್ಲವನ್ನೂ ಅಳವಡಿಸಿಕೊಳ್ಳಲಾಯಿತು.

ಚುನಾವಣಾ ದಿನ ನಿಗದಿತ ದಿನಾಂಕ ಸಮಯ ದಂದು ಚುನಾವಣೆಯನ್ನು ನಡೆಸಲು ಮೊದಲೇ ನಿರ್ಧರಿಸಿದ್ದು ಚುನಾವಣಾ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿ ಮಾರ್ಗದರ್ಶನ ಕೊಡಲಾಯಿತು. ಚುನಾವಣೆಯಲ್ಲಿ ಬಳಸುವ EVM ಗಳ ಮಾದರಿಯಲ್ಲೇ ಮೊಬೈಲ್ ನಲ್ಲಿ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿ ವಿದ್ಯಾರ್ಥಿಗಳು ಮತ ಹಾಕುವಂತೆ ಮಾಡಲಾಯಿತು.
ವಿದ್ಯಾರ್ಥಿಗಳ ಗುರುತು ಪತ್ರ, (ಕಾಲೇಜು ಗುರುತು ಪತ್ರ)
ವನ್ನು ಹಾಜರಿ ಪುಸ್ತಕದಲ್ಲಿ ಪರೀಕ್ಷಿಸಿ ಗುರುತಿಸಿ, ನಂತರ ಬಲಗೈ ತೋರುಬೆರಳಿಗೆ ಗುರುತು ಹಾಕಿ, ಆ ಗುರುತನ್ನು ಪರೀಕ್ಷಿಸಿ Mobile ನಲ್ಲಿರುವ EVM App ನಲ್ಲಿ ಕಂಟ್ರೋಲ್ ಯುನಿಟ್ ( mobile app) ನಲ್ಲಿ ಬಟನ್ ಒತ್ತಿ ನಂತರ ಬ್ಯಾಲೆಟ್ ಯುನಿಟ್ ( ಅದೇ mobile app) ನಲ್ಲಿ ವಿದ್ಯಾರ್ಥಿಗಳು ಮತ ಚಲಾಯಿಸಿದರು.
ರಂಗೇರಿದ ಕಣ:
ಎಲ್ಲಾ ಚುನಾವಣೆಯಂತೆ ಇಲ್ಲಿನ ಮತದಾನ ಕಣ ಕೂಡ ರಂಗೇರಿದ್ದು ಎರಡೂ ತಂಡದವರು ಭರ್ಜರಿ ಪ್ರಚಾರ ಗೈದರು. ಮತ ಬೇಡಿಕೆ, ಮತ ಓಲೈಕೆ, ಬಿನ್ನವಿಸುವಿಕೆ, ಆಶ್ವಾಸನೆಗಳ ಮಹಾಪೂರವೇ ಹರಿದು ಬಂತು.
ನನ್ನ ಮತ ಮಾರಾಟಕ್ಕಿಲ್ಲ ತತ್ತ್ವ:
ಮತದಾರ ಕೂಡಾ ಇಬ್ಬರ ಓಲೈಕೆಗೂ ಆಶ್ವಾಸನೆಗೂ ಒಪ್ಪಿ ದಂತೆ ಜಾಣ್ಮೆಯಿಂದ ವರ್ತಿಸಿ , ಅಳೆದು ತೂಗಿ ಯಾವುದೇ ಓಲೈಕೆಗೆ ಮಣಿಯದೆ, ಯಾವುದೇ ಬೇಡಿಕೆಯನ್ನಿಡದೇ ಜಾಗ್ರತೆಯಿಂದ ವರ್ತಿಸಿದ್ದರು
ಚುನಾವಣಾ ಪೂರ್ವ ಸಮೀಕ್ಷೆ
ಮತದಾರ ತುಂಬಾ ಜಾಣ್ಮೆಯಿಂದ ವರ್ತಿಸಿದ ಕಾರಣ ಎರಡೂ ತಂಡದವರಿಗೆ ತಾವೇ ಗೆಲ್ಲುವೆವೆಂಬ ಆಶಾ ಭಾವನೆ ಮೂಡಿಸಿದ್ದರು.. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎರಡೂ ತಂಡದವರು ಸಮಬಲ ಮತ ಪಡೆಯುವ ಅವಕಾಶವಿದ್ದು ನಿರ್ಣಯ ಕೂದಲೆಳೆಯ ಅಂತರದಲ್ಲಿ ಎನ್ನುವುದು ಹೆಚ್ಚಿನವರ ಅಭಿಪ್ರಾಯವಾಗಿತ್ತು.
ತಲೆಕೆಳಗಾದ ನಿರೀಕ್ಷೆ.
ಸಂಪೂರ್ಣ ಮತದಾನ ಮುಗಿದ ಮೇಲೆ ಎರಡೂ ತಂಡದವರು ಹಾಗೂ ಏಜೆಂಟ್ ರನ್ನು ಕರೆಸಿ ಮತದಾನದ ballot Unit ಅನ್ನು ಘೋಷಣೆ ಯೊಂದಿಗೆ Close ಮಾಡಲಾಯಿತು. ನಂತರ ಅಭ್ಯರ್ಥಿಗಳ ಹಾಗೂ ಅವರ ಏಜೆಂಟರ ಎದುರಲ್ಲಿ result ನೋಡಲಾಯಿತು. ಆದರೆ ಮತದಾರ ಎಲ್ಲರ ನಿರೀಕ್ಷೆಯನ್ನು ಸುಳ್ಳಾಗಿಸಿ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಕು| ಸತ್ಯಪ್ರಸಾದ್ ಹಾಗೂ ವಿದ್ಯಾರ್ಥಿ ನಾಯಕಿಯಾಗಿ ಕು| ತನ್ವಿತಾ ಇವರನ್ನು ಬಹು ಮತ ಅಂತರದಲ್ಲಿ ಗೆಲ್ಲಿಸುವ ಮೂಲಕ ಗೆದ್ದ ತಂಡಕ್ಕೆ ಆಶ್ಚರ್ಯ ಮೂಡಿಸಿದರೆ ಸೋತ ತಂಡಕ್ಕೆ ನಿರಾಸೆ ಮೂಡಿಸಿದರು.
ಪದಾಧಿಕಾರಿಗಳನ್ನು ಆಯ್ಕೆ
ಗೆದ್ದ ತಂಡದವರು ಆಡಳಿತ ನಿರ್ವಹಣೆ ಮಾಡುವ ಉದ್ಧೇಶದಿಂದ ಚುನಾವಣಾ ಪೂರ್ವದಲ್ಲಿ ತಮ್ಮ ಮಂತ್ತಿಮಂಡಳದೊಂದಿಗೆ ಸ್ಪರ್ಧಿಸಿದ್ದು ಅದರಂತೆ ವಿದ್ಯಾಮಂತ್ರಿ ಧನುಷ್
ಸ್ವಚ್ಛತೆ ಮತ್ತು ನೀರಾವರ ಮಂತ್ರಿ ರಕ್ಷತ್ ಕ್ರೀಡಾ ಮಂತ್ರಿ ಪ್ರಾಣೇಶ್ ಹಾಗು ವಿಧ್ಯಾರ್ಥಿನಿ ನಾಯಕಿ ಕು| ತನ್ವಿತಾ ಇವರ ತರಗತಿ ಪ್ರತಿನಿಧಿಗಳಾಗಿ
ಪ್ರಥಮ ವಾಣಿಜ್ಯ. ಕು| ಬಾಂಧವ್ಯ ಪ್ರಥಮ ವಿಜ್ಞಾನ. ಕು| ಸಿಂಚನಾ ದ್ವಿತೀಯ ವಿಜ್ಞಾನ. ಕು| ಅನ್ವಿತಾ
ಇವರು ಮತದಾರರ ಮತದಾಣತಿಯಂತೆ ತಮ್ಮ ಜವಾಬ್ದಾರಿ ಸ್ವೀಕರಿಸಿದರು.
ಪ್ರಾಂಶುಪಾಲರಾದ ಶ್ರೀಯುತ ರಣಜಿತ್ ಕುಮಾರ್ ಶೆಟ್ಟಿ ಇವರು ಮೊದಲಿಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಂದ ಮತ ಚಲಾಯಿಸಿದರು.
ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀಯುತ ಎಜಾಜ್ ರವರು ಚುನಾವಣೆ, ಚುನಾವಣಾ ಪ್ರಕ್ರಿಯೆ, ಮತದ ಪ್ರಾಮುಖ್ಯತೆ, ಮತ ಚಲಾವಣೆ ಹಾಗೂ ಅದರ ಮಹತ್ವದ ಕುರಿತು ಮಾಹಿತಿ ನೀಡಿದರು.
ಅರ್ಥಶಾಸ್ತ್ರ ಉಪನ್ಯಾಸಕರಾದ ಅಕ್ಷಯ್ ಹೆಗ್ಡೆ ಸಹಭಾಗಿತ್ವದಲ್ಲಿ ಚುನಾವಣಾ ಪ್ರಕಿಯೇ ನಡೆಯಿತು.
ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಕು. ಶ್ರುತಿ ಹಾಗೂ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಕು. ವಿಸ್ಮಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರಚಾರ, ಮತಬೇಡಿಕೆ, ಪ್ರಣಾಳಿಕೆ, ಗೆಲುವಿನ ಊಹಾಪೋಹಗಳೊಂದಿಗೆ ಚುನಾವಣಾ ಕಣವು ವಿದ್ಯಾರ್ಥಿಗಳ ಕೌತುಕಕ್ಕೆ ಕಾರಣವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶವನ್ನು ಪ್ರಕಟಿಸಲಾಯಿತು.
ಅದರಂತೆ ವಿರೋಧ ಪಕ್ಷದ ನಾಯಕನಾಗಿ ಕು| ಕೃತಿಕ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಕು| ನಾಸೀಮಾ ಅಡಳಿತರೂಡ ಸರಕಾರ ನೀಡಿರುವ ಆಶ್ವಾಸನೆ ಈಡೇರಿಕೆ, ಸದ್ಯದಲ್ಲಿ ಮಾಡಬೇಕಾಗಿರುವ ಕಾರ್ಯಭಾರ ಇವಿಷ್ಟನ್ನೂ ಗಮನಿಸಿ ಮೊದಲ ಪಾರ್ಲಿಮೆಂಟ್ ನಲ್ಲಿ ಪ್ರಶ್ನಿಸಲು ತಯಾರಿ ಮಾಡುವುದಾಗಿಯೂ. ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯದಿದ್ದಲ್ಲಿ ಮತ್ತೆ ಅವಿಶ್ವಾಸ ಗೊತ್ತುವಳಿ ( No confidence motion) ಪ್ರಕಟಿಸಿ, ಮತ್ತೆ ಪುನ ಜನಾಭಿಪ್ರಾಯ ವನ್ನು ಪಡೆದು ಮರು ಚುನಾವಣೆ ಕರೆ ನೀಡಿ ಬಹುಮತ ಪಡೆಯುವುದಾಗಿ ಘೋಷಿಸಿದ್ದಾರೆ.
ಎಲ್ಲಾ ಮತದಾರರು ಮೊದಲ ಪಾರ್ಲಿಮೆಂಟ್ ಎದುರು ನೋಡುತ್ತಿದ್ದು ಅದರಲ್ಲಿ ಆಡಳಿತ ಪಕ್ಷ ತನ್ನ ಕೆಲಸ ಕಾರ್ಯದ ಮೂಲಕ ಸಂತೃಪ್ತಿ ಗೊಳಿಸುವರೋ ಅಥವಾ ವಿರೋಧ ಪಕ್ಷದವರು ಸತತ ಆಪಾದನೆ ಮೂಲಕ ಆಡಳಿತ ಪಕ್ಷಕ್ಜೆ ಒತ್ತಡ ಹೇರುತ್ತಾರೋ ಎನ್ನುವ ನಿರೀಕ್ಷೆ ಯಲ್ಲಿದ್ದಾರೆ.