


ಡೈಲಿ ವಾರ್ತೆ: 16/ಆಗಸ್ಟ್/ 2025


ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಹಾಗೂ ಮಸೀದಿ ವತಿಯಿಂದ 79 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ ಇದರ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಹಾಗೂ ಪಂತಡ್ಕ ಮಸೀದಿ ಉಸ್ತುವಾರಿ ಸಮಿತಿ ವತಿಯಿಂದ ಪಂತಡ್ಕ ಮಸೀದಿ ವಠಾರದಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಪಂತಡ್ಕ ಮಸೀದಿ ಉಸ್ತುವಾರಿ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಹಾಜಿ ನೆಡ್ಯಾಲು ಧ್ವಜರೋಹಣ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದ್ರಸ ಉಸ್ತುವಾರಿ ಲತೀಫ್ ನೇರಳಕಟ್ಟೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಪಂತಡ್ಕ ಮಸೀದಿ ಉಸ್ತುವಾರಿ ಸಮಿತಿ ಕೋಶಾಧಿಕಾರಿ ಅಶ್ರಫ್ ಭಾರತ್ ಕಾರ್ಸ್, ಜೊತೆ ಕಾರ್ಯದರ್ಶಿ ಇಂಜಿನಿಯರ್ ಲತೀಫ್ ಕೊಡಾಜೆ ವಿದ್ಯಾರ್ಥಿ ನಾಯಕ ಸಲ್ಮಾನ್ ಫಾರಿಸ್ ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಮಾಡಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮದ್ರಸ ಮುಖ್ಯ ಶಿಕ್ಷಕ ಜಾಫರ್ ಸ್ವಾದಿಕ್ ಅರ್ಶದಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.