



ಡೈಲಿವಾರ್ತೆ:17/ಏಪ್ರಿಲ್ /2026

ಶ್ರೀ ಬಬ್ಬುಸ್ವಾಮಿ ನೇಮೋತ್ಸವ – ಹಸಿರು ಹೊರೆಕಾಣಿಕೆಗೆ ಚಾಲನೆ

ಕೋಟ: ಗುಂಡ್ಮಿ ಕಾರಣಿಕ ಶಕ್ತಿ, ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರ ನೇಮೋತ್ಸವದ ಹಸಿರು ಹೊರಕಾಣಿಕೆಗೆ ಶುಕ್ರವಾರ ಯೋಗ ಗುರುಕುಲದ ಮುಖ್ಯಸ್ಥ ಡಾ.ವಿದ್ವಾನ್ ವಿಜಯ ಮಂಜರ್ ಚಾಲನೆ ನೀಡಿದರು.


ನೇಮೋತ್ಸವದ ಮೊದಲ ದಿನ ಅಂಗವಾಗಿ ಕೋಟ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆಗೆ
ನೂರಾರು ಭಕ್ತ ಸಮುದಾಯದ ನಡುವೆ ಚಾಲನೆ ನೀಡಲಾಯಿತು.
ನೇಮೋತ್ಸವ ಸಮಿತಿಯ ಅಧ್ಯಕ್ಷ ಬಿ. ಕೇಶವ ಕುಂದರ್, ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ, ಸ್ವಾಗತ ಸಮಿತಿಯ ನಾಗರಾಜ್ ಗಾಣಿಗ, ಜಗದೀಶ್ ಗಂಗೊಳ್ಳಿ, ಸುಭಾಷ್ ಶೆಟ್ಟಿ, ರಮೇಶ್ ಕಾರಂತ್, ಜ್ಯೋತಿ ಉದಯ್ ಕುಮಾರ್, ಸುಲತಾ ಹೆಗ್ಡೆ, ಚಂದ್ರ ಮೋಹನ್, ಮನೋಜ್ ಕುಮಾರ್, ಗಣೇಶ್ ಆಚಾರ್ ಕೂರಾಡಿ, ದೈವಸ್ಥಾನದ ಅಧ್ಯಕ್ಷ ಚಂದ್ರ ಕಟ್ಟಿನಮನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಚಂಡೆ ವಾದದೊಂದಿಗೆ ಕೋಟದಿಂದ ಗುಂಡ್ಮಿಯ ಶ್ರೀ ಬಬ್ಬುಸ್ವಾಮಿ ಕ್ಷೇತ್ರದವರೆಗೆ ಮೆರವಣಿಗೆ ಸಾಗಿತು.