ಡೈಲಿವಾರ್ತೆ:18/ಏಪ್ರಿಲ್ /2026

ಅಡ್ಡೂರು: SDPI ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ

ಮಂಗಳೂರು: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಗ್ರಾಮ ಪಂಚಾಯತ್ ಸಮಿತಿ ವತಿಯಿಂದ ಮರ್ಹೂಮ ಸಾರಮ್ಮ ಇಬ್ರಾಹಿಂ ಗೋಳಿಪಡ್ಪು ಸ್ಮರಣಾರ್ಥ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಅಡ್ಡೂರು ಜಂಕ್ಷನ್ ನಲ್ಲಿ ನಡೆಯಿತು

ಹಾಜಿ ಇಬ್ರಾಹಿಂ ಗೋಳಿ ಪಡ್ಪು ರವರು SDPI ಗುರುಪುರ ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರಾದ SB ಅಬ್ದುಲ್ ಸತ್ತಾರ್ ರವರಿಗೆ ಆಂಬ್ಯುಲೆನ್ಸ್ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ವಹಿಸಿದರು, SDPI ಮಂಗಳೂರು ನಗರ ಜಿಲ್ಲಾ ಕಾರ್ಯಾಧ್ಯಕ್ಷ ಅಶ್ರಫ್ ಅಡ್ಡೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು, SDPI ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಮುಖ್ಯ ಭಾಷಣ ಮಾಡಿದರು.

ಈ ಬಾರಿಯ PUC ಪರಿಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವೃಷಾ, ಹಾಜಿರಾ, ಹಲೀಮ ಅಫ್ರಾ, ನಿಝಾ ಫಾತಿಮಾ ಹಾಗೂ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಫರಾ ನಾಸಿರ್, ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡ್ಡೂರು, ಹಾಜಿ ಇಬ್ರಾಹಿಂ ಗೋಳಿ ಪಡ್ಪು, ಎ.ಕೆ.ಮುಸ್ತಾಪ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಜಿ ಎಮ್ ಎಚ್ ಮುಹಿಯುದ್ದೀನ್ (ಅಧ್ಯಕ್ಷರು ಮದರಸ ಮ್ಯಾನೇಜ್ಮೆಂಟ್ ದ.ಕ.ಜಿಲ್ಲೆ), ಅಹಮದ್ ಬಾವ ಅಂಗಡಿ ಮನೆ (ಅಧ್ಯಕ್ಷರು ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು), ಝಕರಿಯ ಕೋಡಿಬೆಟ್ಟು (ಅಧ್ಯಕ್ಷರು ಜುಮ್ಮಾ ಮಸೀದಿ ಕಾಂಜಿಲಕೋಡಿ), ಶೌಕತ್ ಅಲಿ (ಅಧ್ಯಕ್ಷರು ಆಯಿಶಾ ಮಸೀದಿ ಅಡ್ಡೂರು), ಶಾಹೀಕ್ ಪಾಂಡೇಲ್ (ಜಿಲ್ಲಾ ಸಮಿತಿ ಸದಸ್ಯರು SDPI ಮಂಗಳೂರು ನಗರ ಜಿಲ್ಲೆ) ಉಸ್ಮಾನ್ ಗುರುಪುರ (ಅಧ್ಯಕ್ಷರು SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ), ಎ.ಕೆ.ರಿಯಾಝ್ (ಉಪಾಧ್ಯಕ್ಷರು SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ), ಶರೀಫ್ ಅಡ್ಡೂರು (ಅಧ್ಯಕ್ಷರು SDPI ಗುರುಪುರ ಬ್ಲಾಕ್ ಸಮಿತಿ), ಝೈನುದ್ದೀನ್ ಗರಡಿ (ಉಪಾಧ್ಯಕ್ಷರು ಬಿ ಜೆ ಎಂ ಅಡ್ಡೂರು), ಅಬ್ದುಲ್ ರಝಾಕ್ ನಂದ್ಯ (ಅಧ್ಯಕ್ಷರು ಅಡ್ಡೂರು ಸೆಂಟ್ರಲ್ ಕಮಿಟಿ), ಡಾ! ಇ.ಕೆ ಸಿದ್ದೀಕ್ (ಬ್ಯಾರಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು), ಏ.ಕೆ ಮುಸ್ತಫ (ಉಪಾಧ್ಯಕ್ಷರು SDPI ಗುರುಪುರ ಪಂಚಾಯತ್ ಸಮಿತಿ), ಸಫರಾ ನಾಸಿರ್ (ಮಾಜಿ ಅಧ್ಯಕ್ಷರು ಗುರುಪುರ ಗ್ರಾಮ ಪಂಚಾಯತ್), ಶೈನಾಝ್ ಪಿ.ಸಿ (ಅಧ್ಯಕ್ಷರು ವಿಮೆನ್ ಇಂಡಿಯಾ ಮೂವ್ಮೆಂಟ್ ಅಡ್ಡೂರು), ಇಲ್ಯಾಸ್ ಹೊಳೆ ಬದಿ (ಉಪಾಧ್ಯಕ್ಷರು ಫೈವ್ ಸ್ಟಾರ್ ಅಡ್ಡೂರು), ಮೊಹಮ್ಮದ್ ಹನೀಫ್
(ಅಧ್ಯಕ್ಷರು ರೋಝ್ ಫ್ರೆಂಡ್ಸ್ ಕಳಸಗುರಿ), ಆರಿಸ್ ಕೆಳಗಿನಕೆರೆ
(ಅಧ್ಯಕ್ಷರು FCK ಕೆಳಗಿನ ಕೆರೆ), ಮನ್ಸೂರ್ ಮಣ್ಣಗುಡ್ಡೆ (ಅಧ್ಯಕ್ಷರು ಹೆಲ್ಪಿಂಗ್ ಹ್ಯಾಂಡ್ ಮಂಜೊಟ್ಟಿ),
ಕಮಲ್ ಕೋಡಿಬೆಟ್ಟು (ಅಧ್ಯಕ್ಷರು I20 ಗೈಸ್ ಕಾಂಜಿಲಕೋಡಿ), ಭೋಜ ಮೂಲ್ಯ (ಅಧ್ಯಕ್ಷರು ನವಜೋತಿ ಫ್ರೆಂಡ್ಸ್ ಕಳಸಗುರಿ ಗುರಿ), ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್, ಮನ್ಸೂರ್, ಶಾಹಿಕ್ ರಿಯಾಝ್, ಬುಶ್ರಾ, ದಿಲ್ಶಾದ್ ಅಝ್ಮೀನ, ರೆಹಾನ ಉಪಸ್ಥಿತರಿದ್ದರು,

ಅಸ್ತಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಎ.ಕೆ ರಿಯಾಝ್ ವಂದಿಸಿದರು