ಡೈಲಿ ವಾರ್ತೆ:18 ಏಪ್ರಿಲ್ 2023
ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ರ ಆಸ್ತಿ ವಿವರ ಆಯೋಗಕ್ಕೆ ಸಲ್ಲಿಕೆ: ಇವರು ಘೋಷಿಸಿದ ಆಸ್ತಿ ವಿವರ..?
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಎ.17 ರಂದು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭ ಇವರ ಬಳಿರುವ ಆಸ್ತಿ ವಿವರ ಆಯೋಗಕ್ಕೆ ಸಲ್ಲಿಸಿದ್ದು ಒಟ್ಟು ಆದಾಯ 33.64 ಕೋಟಿ ರೂ.ಗಳಾಗಿವೆ.
ಇದರಲ್ಲಿ ಅವರ ಚರಾಸ್ಥಿ ಮೌಲ್ಯ 24,08,62,493 ರೂ.ಗಳಾದರೆ ಅವರಲ್ಲಿರುವ ಸ್ಥಿರಾಸ್ಥಿಗಳ ಒಟ್ಟು ಮೌಲ್ಯ 9,56,38,000 ರೂ.ಗಳಾಗಿವೆ.
ಕಾಂಚನ್ ಅವರು ಒಟ್ಟು 6,16,82,509 ರೂ. ಸಾಲ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದಾರೆ. ಕಾಂಚನ್ ಅವರ ಪತ್ನಿಯ ಒಟ್ಟು ಆದಾಯ 28.64 ಕೋಟಿ ರೂ.ಗಳಾಗಿವೆ. ಇವುಗಳಲ್ಲಿ ಅವರ ಚರಾಸ್ಥಿಯ ಮೌಲ್ಯ 24.68 ಕೋಟಿ ರೂ.ಗಳಾದರೆ, ಸ್ಥಿರಾಸ್ಥಿಯ ಮೌಲ್ಯ 3.96 ಕೋಟಿ ರೂ.ಗಳಾಗಿವೆ. ಕಾಂಚನ್ ಅವರು 3 ಲಕ್ಷ ರೂ. ಹಾಗೂ ಪತ್ನಿ 2 ಲಕ್ಷ ರೂ. ನಗದು ಹೊಂದಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.