ಡೈಲಿ ವಾರ್ತೆ: 5 ಜುಲೈ 2023

ಮಂಗಳೂರು: ಭಾರೀ ಗಾಳಿಗೆ ಹೋರ್ಡಿಂಗ್ ಬಿದ್ದು ವಾಹನಗಳು ಜಖಂ; ತಪ್ಪಿದ ಭಾರೀ ಅನಾಹುತ

ಬಿಕರ್ನಕಟ್ಟೆ: ಭಾರೀ ಗಾಳಿಗೆ ಹೋರ್ಡಿಂಗ್ ಬಿದ್ದು ವಾಹನಗಳು ಜಖಂ; ತಪ್ಪಿದ ಭಾರೀ ಅನಾಹುತ

ಮಂಗಳೂರು: ಭಾರೀ ಗಾಳಿಯೊಂದಿಗೆ ಸುರಿದ ಮಳೆಯ ಪರಿಣಾಮ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಕಟ್ಟಡದ ಮೇಲಿದ್ದ ಭಾರೀ ಗಾತ್ರದ ಹೋರ್ಡಿಂಗ್ ಬಿದ್ದ ಪರಿಣಾಮ ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಹಲವು ವಾಹನಗಳು ಜಖಂಗೊಂಡಿರುವ ಬಗ್ಗೆ ವರದಿಯಾಗಿದೆ.

ಈ ಪ್ರದೇಶದಲ್ಲಿ ಶಾಲಾ ಮಕ್ಕಳ ವಾಹನಗಳು ಸಂಚರಿಸುತ್ತಿರುತ್ತವೆ. ಶಾಲಾ ಕಾಲೇಜು ರಜೆ ಇದ್ದ ಕಾರಣ ಈ ಘಟನೆ ಸಂಭವಿಸುವ ಸಂದರ್ಭ ಜನರ ಓಡಾಟ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

ಸುಮಾರು 50 ವರ್ಷಗಳಿಗೂ ಹಿಂದಿನ ಕಟ್ಟಡದಲ್ಲಿ ಎರಡೆರಡು ಟವರ್ಗಳನ್ನು ಕೂಡಾ ಅಳವಡಿಸಲಾಗಿದೆ. ಇದು ಯಾವತ್ತಿಗೂ ಅಪಾಯಕಾರಿಯೇ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.