ಡೈಲಿ ವಾರ್ತೆ: 24/ಜುಲೈ /2024
ತಬ್ಬಲಿಯಾದ ನಾಯಿ ಮರಿಗಳಿಗೆ ಹಾಲುಣಿಸಿದ ಹಸು.! (ವಿಡಿಯೋ ವೈರಲ್)
ಮನುಷ್ಯರ ನಡುವೆ ಜಾತಿ, ವರ್ಣಗಳ ಭೇದಗಳಿರುವಂತೆ ಮೂಕ ಪ್ರಾಣಿಗಳಲ್ಲಿ ಇದ್ಯಾವುದೇ ಬೇಧ-ಬಾವಗಳಿಲ್ಲ. ಅಷ್ಟೇ ಅಲ್ಲದೆ ಈ ಪ್ರಾಣಿಗಳಿಗೆ ಇರುವಷ್ಟು ಕರುಣೆ, ದಯೆ, ಮಾನವೀಯ ಮೌಲ್ಯ ಮನುಷ್ಯರಲ್ಲಿಲ್ಲ. ಹೌದು ಅದೆಷ್ಟೋ ಬಾರಿ ಮನುಷ್ಯರಿಗಿಂತ ಹೆಚ್ಚಾಗಿಯೇ ಒಂದು ಜಾತಿಯ ಪ್ರಾಣಿ ಇತರ ಜಾತಿಯ ಪ್ರಾಣಿಗಳಿಗೆ ಕಷ್ಟದಲ್ಲಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದದ್ದುಂಟು. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ಹಸಿವಿನಿಂದ ಕಂಗೆಟ್ಟಿದ್ದ ನಾಯಿ ಮರಿಗಳಿಗೆ ಗೋಮಾತೆ ಪ್ರೀತಿಯಿಂದ ಹಾಲುಣಿಸಿದೆ. ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಸುವಿನ ಈ ಮಾತೃ ವಾತ್ಸಲ್ಯಕ್ಕೆ ನೆಟ್ಟಿಗರ ಮನಗೆದ್ದಿದೆ.
ಈ ಹೃದಯಸ್ಪರ್ಶಿ ಘಟನೆ ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅಪಘಾತವೊಂದರಲ್ಲಿ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ, ನಾಯಿ ಮರಿಗಳಿಗೆ ಹಸುವೊಂದು ಹಾಲುಣಿಸಿ ಮಾತೃ ಪ್ರೇಮವನ್ನು ನೀಡಿತ್ತು. ಈ ಕುರಿತ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.