ಡೈಲಿ ವಾರ್ತೆ: 26/ಜುಲೈ /2024

ಮಂಗಳೂರು: ಬಾರಿ ಬಿರುಗಾಳಿ ಮಳೆಗೆ ಶೀಟ್ ಉರುಳಿಬಿದ್ದು ಕಾರುಗಳು ಜಖಂ.!

ಮಂಗಳೂರು: ಬಾರಿ ಬಿರುಗಾಳಿ ಮಳೆಗೆ ಶೀಟ್ ಉರುಳಿಬಿದ್ದು ಕಾರುಗಳು ಜಖಂಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ನಲಪಾಡ್ ಕುಣಿಲ್ ಟವರ್ ನಲ್ಲಿ ನಡೆದಿದೆ.

ಬಾರಿ ಬಿರುಗಾಳಿ ಮಳೆ ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಅವಾಂತರ ಸೃಷ್ಟಿಸಿದೆ. ಅಲ್ಲದೆ ಭಾರಿ ಗಾತ್ರದ ಶೀಟ್ ಕಾರುಗಳ ಮೇಲೆ ಉರುಳಿ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿದೆ. ಕಾರುಗಳನ್ನು ವಸತಿ ಸಮುಚ್ಚಯದ ಪಾರ್ಕಿಂಗ್ ಬಳಿ ನಿಲ್ಲಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಂತಹ ಘಟನೆ ನಡೆದಿಲ್ಲ.